ತ್ರಿಭಾಷಾ ಸೂತ್ರವೀ ತ್ರಿಶೂಲವು ಎಂದು ಕುವೆಂಪು ಹೇಳಿದ್ದರು. ನೆಲಮೂಲದ್ದಲ್ಲದ ಗೊತ್ತಿಲ್ಲದ ಭಾಷೆಯನ್ನು ಮಕ್ಕಳಿಗೆ ಬಲವಂತವಾಗಿ ಕಲಿಸಿ, ಅದಕ್ಕೆ ಅಂಕ ಇಟ್ಟು ಪರೀಕ್ಷೆಗೆ ಒಡ್ಡಿ ಅನುತ್ತೀರ್ಣಗೊಂಡ ಮಕ್ಕಳಲ್ಲಿ ತಾವು ಕೀಳೆಂದು ಭಾವಿಸುವಂತೆ ಮಾಡುವ ಪದ್ಧತಿಗೆ ಮೊದಲಿನಿಂದಲೂ ವಿರೋಧ ಇತ್ತು. ಅಂಕ ನೀಡುವ ಬದಲು ಗ್ರೇಡ್ ನೀಡುವ ಮೂಲಕ ಅದನ್ನು ಹೋಗಲಾಡಿರುವ ಕೆಲಸ ಮಾಡಿದ್ದೇವೆ ಎಂಬುದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಸಮರ್ಥನೆ. ಹಿಂದಿ ಕಲಿಕೆಗೆ ಅಡ್ಡಿ ಇಲ್ಲ, ಸಾಮರ್ಥ್ಯ ಪರೀಕ್ಷೆಗೆ ಒಡ್ಡುವ ಸವಾಲಿಗೆ ಮಾತ್ರ ಕಡಿವಾಣ. ಇದು ಸರಿಯೇ? ಇದರಿಂದ ಮಕ್ಕಳ ಕಲಿಕೆಗೆ ಹಿನ್ನಡೆಯೇ? ದೇಶ–ರಾಜ್ಯಕ್ಕೊಂದು ಭಾಷಾ ನೀತಿ ಬೇಕೆ ಎಂಬುದರ ಕುರಿತ ಚರ್ಚೆ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.