ಹಿರೇಕೆರೂರ: ‘ಪ್ರಸ್ತುತ ಸಮಾಜದಲ್ಲಿ ಆಚಾರ ವಿಚಾರ ಸಂಪ್ರದಾಯಗಳು ಏನಾಗಿವೆ ಎಂಬುದನ್ನು ಅರಿತು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದರೆ ವಡ್ಡಾರಾಧನೆ ಓದಬೇಕು’ ಎಂದು ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗಂಗಾಧರ ದೈವಜ್ಞ ಹೇಳಿದರು.

ತಾಲ್ಲೂಕಿನ ಹಂಸಭಾವಿ ಗ್ರಾಮದ ಮೃತ್ಯುಂಜಯ ವಿದ್ಯಾಪೀಠದ ಮಹಾಂತಸ್ವಾಮಿ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಆಂತರಿಕ ಗುಣಮಟ್ಟ ಕೋಶದಡಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆದಿಕವಿ ಪಂಪ ಅಧ್ಯಯನ ಪೀಠ ಮತ್ತು ಮಹಾಂತಸ್ವಾಮಿ ಮಹಾವಿದ್ಯಾಲಯದ ಕನ್ನಡ ಮತ್ತು ಇತಿಹಾಸ ವಿಭಾಗಗಳ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಪಂಪ ವ್ಯಾಖ್ಯಾನ ಮಾಲೆ ವಿಶೇಷ ಉಪನ್ಯಾಸ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಡ್ಡಾರಾಧನೆಯು ರಾಜಕೀಯ, ಸಮಾಜ, ಆರ್ಥಿಕ ಸ್ಥಿತಿಗತಿಗಳು, ಕೌಟುಂಬಿಕ ಜೀವನ, ಪಿತೃಪ್ರದಾನ-ಮಾತೃಪ್ರದಾನ ವ್ಯವಸ್ಥೆ, ಗಂಡು-ಹೆಣ್ಣಿನ ಸ್ಥಾನಮಾನ, ಶಿಕ್ಷಣ ಪದ್ಧತಿ, ಗುರುವಿನ ಮಹತ್ವವನ್ನು ತಿಳಿಸುತ್ತದೆ’ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ಪ್ರಾದ್ಯಾಪಕ ಪ್ರೇಮಾನಂದ ಲಕ್ಕಣ್ಣನವರ ಮಾತನಾಡಿ, ‘ಭಾಷೆಯ ಪವಿತ್ರತೆ ಹಾಗೂ ಆಸಕ್ತಿ ಕಡಿಮೆಯಾದ ಈ ಕಾಲದಲ್ಲಿ ಮಹಾಕಾವ್ಯಗಳಲ್ಲಿ ಅಡಗಿರುವ ಸೊಬಗು, ಸಾಂಸ್ಕೃತಿಕ ಶ್ರೀಮಂತ ಪರಂಪರೆಯ ಹಿರಿಮೆಯನ್ನು ತಿಳಿಸುವ ಅವಶ್ಯಕತೆ ಇದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೃತ್ಯುಂಜಯ ವಿದ್ಯಾಪೀಠದ ಕಾರ್ಯಧ್ಯಕ್ಷ ಪಿ.ವಿ. ಕೆರೂಡಿ, ಕವಿವಿ ಪಂಪ ಅದ್ಯಯನ ಪೀಠದ ಸಂಯೋಜಕ ವಿ.ಎಲ್. ಪಾಟೀಲ ಮಾತನಾಡಿದರು. ನವೋದಯ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಿ.ಎಫ್. ಕಣ್ಣಮ್ಮನವರ, ಪ್ರಾಚಾರ್ಯ ಎಂ.ಜಿ ಬಂಡಿವಡ್ಡರ, ಉಪಪ್ರಾಚಾರ್ಯ ಎಸ್.ಎಸ್. ಮಠಪತಿ , ಎಂ.ಎಂ. ಅಕ್ಕಿ , ಕೆ.ವಿ ಜಯಪ್ಪ, ರಾಜಕುಮಾರ ಎಸ್. ಸಾವಳಗಿ , ಬಸವ್ವ ಹಮ್ಮಿಣಿ , ವಿ.ಎಸ್. ದಾನೇನವರ, ವೆಂಕಟೇಶ ಪಿ, ಹುಸೇನ್ಸಾಬ ಕಳಗೊಂಡ, ಸೌಮ್ಯ ತಿಳವಳ್ಳಿ, ಎಸ್.ಎಸ್. ಹುಲ್ಲಿನಕೊಪ್ಪ, ಭಾಗ್ಯ ಎಚ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-22-1548020758

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.