ಹಿರಿಯೂರು: ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ರದ್ದುಪಡಿಸಿ, ಹಿಂದಿನ ಪರೀಕ್ಷೆಯ ಫಲಿತಾಂಶವನ್ನೇ ಘೋಷಿಸುವಂತೆ ಆಗ್ರಹಿಸಿ ಸೋಮವಾರ ತಾಲ್ಲೂಕಿನ ಬಬ್ಬೂರು ಫಾರಂ ಸಮೀಪದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು.

ಸರ್ಕಾರದ ಆದೇಶದಂತೆ ಯುಜಿಸಿಇಟಿ-2026ರ ಕೃಷಿಕರ ಕೋಟಾದ ಅಭ್ಯರ್ಥಿಗಳಿಗೆ ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ಕೇಂದ್ರದಲ್ಲಿ ಮರು ಪರೀಕ್ಷೆ ಆಯೋಜಿಸಿದ್ದು, ಬೆಳಿಗ್ಗೆ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳು ಮೊದಲ ಬ್ಯಾಚ್ ಪರೀಕ್ಷೆ ಬರೆದಿದ್ದರು. ಅವರು ಹೊರಗಡೆ ಬಂದ ತಕ್ಷಣವೇ ಪರೀಕ್ಷೆ ಚೆನ್ನಾಗಿ ಬರೆದಿಲ್ಲವೆಂದು ತಿಳಿಸಿದಾಗ ಪೋಷಕರಲ್ಲಿ ಆತಂಕ ಸೃಷ್ಟಿಯಾಯಿತು.

‘ಮರು ಪರೀಕ್ಷೆಯ ಪ್ರಶ್ನೆಪತ್ರಿಕೆ ಕಠಿಣವಾಗಿದ್ದು, ಸಾಕಷ್ಟು ಗೊಂದಲ ಸೃಷಿಸಿದೆ. ಮಕ್ಕಳಿಗೆ ಕಷ್ಟವಾಗಿದೆ. ಹಳೆಯ ಪ್ರವೇಶ ಪತ್ರದಲ್ಲೇ ಮರು ಪರೀಕ್ಷೆ ನಡೆಸುತ್ತಿರುವ ಉದ್ದೇಶ ಏನು? ಈ ಕೇಂದ್ರಕ್ಕೆ ಮಾತ್ರವೇ ಮರುಪರೀಕ್ಷೆ ಏಕೆ? ನೀಟ್ ಮಾದರಿಯಲ್ಲಿ ಎಲ್ಲಾ ಕೇಂದ್ರದಲ್ಲಿ ಏಕೆ ಮಾಡುತ್ತಿಲ್ಲ? ನಕಲು ಆಗಿರುವ ಬಗ್ಗೆ ಏಕೆ ಪರೀಶಿಲನೆ ನಡೆಸಿಲ್ಲ? ಆದರೂ ಮರು ಪರೀಕ್ಷೆ ನಡೆಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಪೋಷಕರು ಪರೀಕ್ಷೆ ರದ್ದುಪಡಿಸಬೇಕು ಎಂದು ಪಟ್ಟು ಹಿಡಿದರು.

ಪ್ರತಿಭಟನೆಯ ಸುದ್ದಿ ತಿಳಿದ ತಕ್ಷಣವೇ ಡಿವೈಎಸ್ಪಿ ಶಿವಕುಮಾರ್ ಹಾಗೂ ಎಸ್.ಐ ಗುಡ್ಡಪ್ಪ ಹೆಚ್ಚಿನ ಪೊಲೀಸ್ ಸಿಬ್ಬಂದಿಯೊಂದಿಗೆ ವಿದ್ಯಾಲಯದ ಆವರಣಕ್ಕೆ ಬಂದು ಪ್ರತಿಭಟನನಿರತರನ್ನು ಸಮಾಧಾನ ಪಡಿಸಲು ಮುಂದಾದರು.

ತಹಶೀಲ್ದಾರ್ ಎಂ.ಸಿದ್ದೇಶ್ ಹಾಗೂ ಶಿವಕುಮಾರ್, ‘ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪ್ರತಿಭಟನೆ ನಿಲ್ಲಿಸಿ. ನಾವೆಲ್ಲಾ ರೈತರ ಮಕ್ಕಳು. ಅವರಿಗಾಗಿ ಈ ಪರೀಕ್ಷೆ ನಡೆಯುತ್ತಿದ್ದು, ಗಲಾಟೆ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ನಿಮ್ಮ ಬೇಡಿಕೆಗಳು ಏನೇ ಇದ್ದರೂ ಮನವಿ ಕೊಡಿ. ಮೇಲಧಿಕಾರಿಗಳಿಗೆ ಕಳಿಸುತ್ತೇವೆ’ ಎಂದು ಭರವಸೆ ನೀಡಿದರು. ಆಗ ಪೋಷಕರು, ‘ಈಗ ನಡೆದಿರುವ ಪರೀಕ್ಷೆ ರದ್ದುಪಡಿಸಿ, ಹಿಂದಿನ ಫಲಿತಾಂಶ ಘೋಷಿಸಬೇಕು’ ಎಂದು ಅಹವಾಲು ಸಲ್ಲಿಸಿದರು.

ಬಬ್ಬೂರು ಫಾರಂ ತೋಟಗಾರಿಕೆ ಮಹಾವಿದ್ಯಾಲಯದ ಕೇಂದ್ರದಲ್ಲಿ ಮೇ 10ರಂದು ಕೃಷಿ ಪ್ರಾಯೋಗಿಕ ಪರೀಕ್ಷೆ ನಡೆದಿತ್ತು. ಅದರಲ್ಲಿ 74 ವಿದ್ಯಾರ್ಥಿಗಳು ಶೇಕಡ ನೂರರಷ್ಟು ಅಂಕಗಳಿಸಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಆದ್ದರಿಂದ ಕೆಲವು ವಿದ್ಯಾರ್ಥಿಗಳು ಹಾಗೂ ಪೋಷಕರು ಮರು ಪರೀಕ್ಷೆಗೆ ಒತ್ತಾಯಿಸಿದ್ದ ಕಾರಣ ಸೋಮವಾರ ಮರುಪರೀಕ್ಷೆ ನಿಗದಿಪಡಿಸಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-44-1230610027

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.