ಹಿರಿಯೂರು: ‘ಆರ್ಥಿಕ ಸಮಸ್ಯೆ ಕಾರಣಕ್ಕೆ ಗುಣಮಟ್ಟದ ಚಿಕಿತ್ಸೆಯಿಂದ ಗ್ರಾಮೀಣ ಜನ ವಂಚಿತರಾಗುತ್ತಿದ್ದಾರೆ’ ಎಂದು ಎಪಿಜೆ ವಿಲೇಜ್ ಟ್ರೀ ಫೌಂಡೇಷನ್ ನಿರ್ದೇಶಕ ಕುಮಾರ್ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಆದಿವಾಲ ಗ್ರಾಮದ ನೆಹರು ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶನಿವಾರ ಎಪಿಜೆ ವಿಲೇಜ್ ಟ್ರೀ ಫೌಂಡೇಷನ್ ನೇತೃತ್ವದಲ್ಲಿ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

‘ಸಂಘ–ಸಂಸ್ಥೆಗಳು ಏರ್ಪಡಿಸುವ ಉಚಿತ ಶಿಬಿರಗಳ ಪ್ರಯೋಜನವನ್ನು ಹಳ್ಳಿಯ ಜನ ಪಡೆಯಲಿ ಎಂಬ ಕಾರಣಕ್ಕೆ ಈ ಶಿಬಿರ ಆಯೋಜಿಸಿದ್ದೇವೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಬಾರದಂತೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಸಕಾಲದಲ್ಲಿ ರೋಗ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಆಧುನಿಕ ತಂತ್ರಜ್ಞಾನ ಮತ್ತು ಒತ್ತಡದ ಬದುಕಿನಿಂದ ಆರೋಗ್ಯ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿವೆ. ನೆಮ್ಮದಿಯ ಬದುಕು ನಡೆಸಲು ಆರೋಗ್ಯಕ್ಕೆ ಪೂರಕವಾದ, ಪೌಷ್ಟಿಕಾಂಶಯುಕ್ತ ಮಿತ ಆಹಾರ ಸೇವನೆ, ಯೋಗ, ಧ್ಯಾನದ ಅಭ್ಯಾಸ ಮಾಡಬೇಕು’ ಎಂದು ಡಾ.ಸ್ಮಿತಾ ಹೇಳಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ್ ಮಾತನಾಡಿದರು. ಸಂಘದ ನಿರ್ದೇಶಕ ಸೈಯದ್ ಮುನೀರ್, ಹರ್ತಿಕೋಟೆ ಮಹಾಸ್ವಾಮಿ, ವೈ.ಕುಮಾರಸ್ವಾಮಿ, ಮುಖ್ಯ ಶಿಕ್ಷಕ ರಂಗಪ್ಪ, ರಘುನಾಯ್ಕ, ಆನಂದ್, ಸುಂದರ್, ಆಸಿಫ್, ಡಾ. ಯಶೋಧರ್, ಶಿವಸ್ವಾಮಿ, ಯೋಗಿತ್, ಮಧು, ವಡಿವೇಲು, ಅರುಣ್, ಪ್ರವೀಣ್ ಕುಮಾರ್, ಕವಿನ್, ಜೀವನ್, ಡಿ. ರಂಜಿತ್, ದಿನೇಶ್, ಗುಹಾನ್, ಅಭಿಷೇಕ್, ಎಸ್. ರಂಜಿತ್, ಗೋಕುಲ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-44-2041515044

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.