ಹಿರಿಯೂರು: ‘ನಿವೃತ್ತಿ ಹೊಂದಿ 40 ವರ್ಷಗಳಾದ ನಂತರ ನನ್ನನ್ನು ಕರೆತಂದು ಸನ್ಮಾನ ಮಾಡುತ್ತಿರುವುದು ಪೂರ್ವಜನ್ಮದ ಪುಣ್ಯ ಇರಬೇಕು. ನಿವೃತ್ತಿ ನಂತರವೂ ಗೌರವಿಸಲ್ಪಡುವ ಏಕಮಾತ್ರ ವೃತ್ತಿ ಶಿಕ್ಷಕ ವೃತ್ತಿ’ ಎಂದು ನಿವೃತ್ತ ಪ್ರಾಂಶುಪಾಲ ಎಲ್.ಎಂ. ಶ್ರೀಕಂಠಯ್ಯ ಹೇಳಿದರು.

ತಾಲ್ಲೂಕಿನ ಹೊಸಯಳನಾಡು ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಭಾನುವಾರ 1993–94 ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘1993–94ರಲ್ಲಿ ಎಸ್ಎಸ್ಎಲ್ಸಿ ಓದಿದವರು ಮಧ್ಯ ವಯಸ್ಸು ದಾಟಿದ್ದಾರೆ. ಆದರೂ ಕಲಿಸಿದ ಗುರುಗಳನ್ನು ಸ್ಮರಣೆಯಲ್ಲಿಟ್ಟುಕೊಂಡು ಗೌರವಿಸುತ್ತಿರುವುದು ಅವರಲ್ಲಿನ ಸಂಸ್ಕಾರಕ್ಕೆ ನಿದರ್ಶನವಾಗಿದೆ. ಇಂತಹ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿ’ ಎಂದು ಆಶಿಸಿದರು.

‘ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣಗೊಂಡಿರುವ ಸನ್ನಿವೇಶದಲ್ಲಿ ಹಳೆಯ ವಿದ್ಯಾರ್ಥಿಗಳು ಸ್ನೇಹ–ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಸುತ್ತಿರುವುದು ಇಂದಿನ ಪೀಳಿಗೆಗೆ ಮಾರ್ಗದರ್ಶನದಂತಿದೆ. ನಾವು ಶಿಕ್ಷಕರಾಗಿದ್ದಾಗ ತಪ್ಪು ಮಾಡಿದ್ದ ವಿದ್ಯಾರ್ಥಿಗಳನ್ನು ಎಷ್ಟೇ ದಂಡಿಸಿದ್ದರೂ ಪೋಷಕರಿಂದ ದೂರುಗಳು ಬರುತ್ತಿರಲಿಲ್ಲ. ಆದರೆ, ಈಗ ಬೈಯ್ಯುವಂತೆಯೂ ಇಲ್ಲ. ಬದಲಾದ ಶಿಕ್ಷಣ ಪದ್ಧತಿಗೆ ತಕ್ಕಂತೆ ಹೊಂದಿಕೊಳ್ಳಲೇಬೇಕು. ನಮ್ಮನ್ನು ಗೌರವಿಸಿರುವ ಶಿಷ್ಯರು ನೆಮ್ಮದಿಯ ಬದುಕು ನಡೆಸಲಿ’ ಎಂದು ಹಾರೈಸಿದರು.

ನಿವೃತ್ತ ಶಿಕ್ಷಕರಾದ ಪಿ.ಕೆ. ಗುರುಲಿಂಗಪ್ಪ, ಆರ್. ಗುರುಮೂರ್ತಿ, ವಿ. ಕೃಷ್ಣಮೂರ್ತಿ, ಎನ್.ಎಚ್. ನಿರಂಜನಮೂರ್ತಿ ಮಾತನಾಡಿದರು.

ಎಸ್ಡಿಎಂಸಿ ಅಧ್ಯಕ್ಷ ಎನ್. ತಿಮ್ಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-44-1208506316

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.