ಹುಕ್ಕೇರಿ: ಜೀವನದಲ್ಲಿ ನೆಮ್ಮದಿಯ ಬದುಕು ಸಾಗಿಸಲು ಮತ್ತು ತಂಟೆ ತಕರಾರು ಇರಬಾರದೆಂದು ಆಶಿಸಿದರೆ, ಎಲ್ಲರೂ ಕಾನೂನು ಅರಿವು ಹೊಂದಬೇಕು ಎಂದು ಜೆ.ಎಂ.ಎಫ್.ಸಿ. ನ್ಯಾಯಾಧೀಶ ಆದಿತ್ಯ ಕಲಾಲ್ ಅಭಿಪ್ರಾಯಪಟ್ಟರು.

ಸೋಮವಾರ ಮಹಾವೀರ ಶಿಕ್ಷಣ ಸಂಸ್ಥೆಯ ಪಿಯು ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ‘ಕಾನೂನು ಅರಿವು ನೆರವು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾನೂನು ಎಂದರೆ ಧರ್ಮ. ಧರ್ಮದಿಂದ ಬದುಕುವುದು ಎಂದರೆ ನ್ಯಾಯಯುತ ಬದುಕು ಸಾಗಿಸುವುದು. ಎಲ್ಲರೂ ಕಾನೂನಿಗೆ ವಿಧೇಯತೆ ತೋರಿಸಿ ಭವಿಷ್ಯತ್ತಿನ ಜೀವನ ಸುಂದರವಾಗಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಬಿ. ಕುರಬೇಟ, ಉಪಾಧ್ಯಕ್ಷ ಬಸವರಾಜ ಜಿನರಾಳಿ, ಸಹಾಯಕ ಕೃಷಿ ನಿರ್ದೇಶಕ ಆರ್.ಬಿ. ನಾಯ್ಕರ, ಎಪಿಪಿ ಶೇಖರ್ ಭಡಗಾಂವೆ, ಪ್ರೊಬೇಷನರಿ ಪಿಎಸ್ಐ ಸತೀಶ ಹಿರೇಕುರಬರ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸ: ವಕೀಲೆ ಲಾವಣ್ಯ ಸಂಸುದ್ದಿ ‘ಐಟಿ ಕಾಯ್ದೆ–2000’,ವಕೀಲೆ ಸುಷ್ಮಾ ದೊಡ್ಡಮನಿ ‘ಸೈಬರ್ ಕ್ರೈಮ್’, ವಕೀಲ ಎಸ್.ಬಿ.ಪಾಟೀಲ ‘ಪೋಕ್ಸೊ ಕಾಯ್ದೆ’, ಪಿಎಸ್ಐ ಸತೀಶ್ ‘ಎಫ್ಐಆರ್’ ಮತ್ತು ‘ಇ–ಎಫ್ಐಆರ್’ ಮತ್ತು ಸ್ಮಾರ್ಟ್ ಪೊಲೀಸ್ ಕುರಿತು ಉಪನ್ಯಾಸ ನೀಡಿದರು. ಸಂಘದ ಕಾರ್ಯದರ್ಶಿ ಎಸ್.ಜಿ. ನದಾಫ, ಸಿಡಿಪಿಒ ಎಚ್. ಹೊಳೆಪ್ಪ, ಇಸಿಒ ಭರತ ಪಾರ್ಥನಳ್ಳಿ, ಪಿಇಒ ಎ.ಐ. ಕೋಟಿವಾಲೆ ಸೇರಿದಂತೆ ಪ್ರಾಚಾರ್ಯರು, ಸಿಬ್ಬಂದಿ, ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಾಚಾರ್ಯ ದುರದುಂಡಿ ಗುಬ್ಬಿ ಸ್ವಾಗತಿಸಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ರಾಜು ಚೌಗಲಾ ಪ್ರಾಸ್ತಾವಿಸಿದರು. ಪ್ರಾಧ್ಯಾಪಕಿ ಎಂ.ಬಿ. ಅರಳಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ವಿಶಾಲ ಮೆಕ್ಕಳಕಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-21-533257002

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.