ಹೊಳೆನರಸೀಪುರ: ಶಿಕ್ಷಣದಿಂದ ಸಿಗುವ ಜ್ಞಾನ ದೇವಾಲಯದಿಂದ ಸಿಗಲ್ಲ. ದೇವಾಲಯಕ್ಕೆ ಹೋಗುವ ಬದಲು ಗ್ರಂಥಾಲಯಕ್ಕೆ ಹೋಗಿ ಶಿಕ್ಷಣ ಕಲಿತು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಎಂದು ಡಾ. ಬಿ.ಆರ್.ಅಂಬೇಡ್ಕರ್ ದೇಶದ ಜನರಿಗೆ ಸಲಹೆ ನೀಡಿದ್ದರು. ಶೋಷಿತರು, ದಮನಿತರನ್ನು ಮುಖ್ಯವಾಹಿನಿಗೆ ತರುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದ್ದು, ಎಲ್ಲರೂ ಚೆನ್ನಾಗಿ ಓದಿ ಸುಶಿಕ್ಷಿತರಾಗಬೇಕು ಎಂದು ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಸಲಹೆ ನೀಡಿದರು.

ಪಟ್ಟಣದ ಡಾ. ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ತನಕ ವೈಭವದ ಮೆರವಣಿಗೆಯಲ್ಲಿ ಭಾಗವಹಿಸಿ ಸುಸ್ತಾಗಿದ್ದೀರಾ. ನಂತರ ವೇದಿಕೆ ಕಾರ್ಯಕ್ರಮ ಅರ್ಥಪೂರ್ಣ ಆಗಿರುವುದಿಲ್ಲ. ಮುಂದಿನ ವರ್ಷದಿಂದ ಇಷ್ಟು ದೊಡ್ಡ ಮೆರವಣಿಗೆ ನಡೆಸುವ ಬದಲು ವೇದಿಕೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸೋಣ ಎಂದು ಸಲಹೆ ನೀಡಿದರು.

ಮುಖ್ಯ ಭಾಷಣಕಾರರಾಗಿದ್ದ ವಕೀಲ ರಾಜಶೇಖರ್ ಮಾತನಾಡಿ, ಡಾ. ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಎಲ್ಲರೂ ವಿದ್ಯಾವಂತರಾಗಿ, ವಿವೇಚನೆ, ಜವಾಬ್ದಾರಿ ಹಾಗೂ ಮತದಾನ ಹಕ್ಕನ್ನು ಪರಿಶುದ್ಧವಾಗಿ ನಿರ್ವಹಿಸಿದಾಗ ಮಾತ್ರ ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣ ಸಾಧ್ಯ. ಶೋಷಿತರನ್ನು, ದಮನಿತರನ್ನು ಮುಖ್ಯವಾಹಿನಿಗೆ ತರಲು ಬಾಬಾಸಾಹೇಬರು ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟರು ಎಂದು ಹೇಳಿದರು.

ತಾ.ಪಂ. ಇಒ ಮುನಿರಾಜು, ಸಂವಿಧಾನ ಪೀಠಿಕೆಯ ಪ್ರಮಾಣವಚನ ಬೋಧಿಸಿದರು. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ, ಬಿಇಒ ಸೋಮಲಿಂಗೇಗೌಡ, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ದಸಂಸ ರಾಜ್ಯ ಸಂಚಾಲಕ ಸೋಮಶೇಖರ್, ವಿಶ್ವಜ್ಞಾನಿ ಡಾ. ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಟ್ರಸ್ಟ್ನ ಎಚ್.ವೈ.ಚಂದ್ರಶೇಖರ್, ಉಮೇಶ್, ಎಚ್.ಟಿ.ಲಕ್ಷ್ಮಣ, ಜವರೇಶ್, ಸುಪ್ರಿತ್ ಪಾಸ್ವಾನ್, ಪುರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ, ಮುತ್ತುರಾಜ್, ಕೃಷ್ಣಮೂರ್ತಿ, ಗೋವಿಂದರಾಜ್, ಕೀಠ ತಜ್ಞ ಅಣ್ಣಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಆರ್. ಮಂಜುನಾಥ್, ಲೇಖಕ ಶಿವರಾಂ, ದಲಿತ ಸಂಘಟನೆಗಳ ಸದಸ್ಯರಾದ ರಾಕೇಶ್, ಶಿವಸ್ವಾಮಿ, ಚಿನ್ನಸ್ವಾಮಿ ಹಾಗೂ ದಲಿತ ಸಂಘಟನೆಗಳ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.

ವಿವಿಧ ಕಲಾತಂಡಗಳ ಜೊತೆಯಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಪಟ್ಟಣದಲ್ಲೆಲ್ಲಾ ಮೆರವಣಿಗೆ ನಡೆಸಿ ವೇದಿಕೆಗೆ ತಂದರು. ಮೆರವಣಿಗೆಯ ಉದ್ದಕ್ಕೂ ಡಿಜೆ ಸೌಂಡ್ನಲ್ಲಿ ಅಂಬೇಡ್ಕರ್ ಬಗೆಗಿನ ಗೀತೆಗಳನ್ನು ಹಾಕಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-36-1646344836

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.