ಹೊಳೆನರಸೀಪುರ: ಕನ್ನಡ ಭಾಷೆಯನ್ನು ಬಳಸುವ ಬಹುತೇಕರಲ್ಲಿ ಪದಗಳ ಉಚ್ಚಾರಣೆ ಸೇರಿದಂತೆ ಬಹಳಷ್ಟು ಲೋಪಗಳು ಕಂಡು ಬರುತ್ತಿವೆ. ವಿದ್ಯಾರ್ಥಿಗಳು ಕನ್ನಡ ಭಾಷೆ ಬಳಕೆ ಮಾಡುವಾಗ ಸರಿಯಾದ ಕ್ರಮದಲ್ಲಿ ಬಳಕೆ ಮಾಡಬೇಕು ಎಂದು ಎಂದು ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ಜಿ.ಕವಿತಾ ಹೇಳಿದರು.

ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ಎಸ್ಎಸ್ಎಸ್, ರೇಂಜರ್ಸ್ ಮತ್ತು ಯುವ ರೆಡ್ ಕ್ರಾಸ್ ಘಟಕಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ 30 ವರ್ಷಗಳ ವಿದ್ಯಾಭ್ಯಾಸ ಹಾಗೂ ಇಂದಿನ ವಿದ್ಯಾಭ್ಯಾಸಕ್ಕೂ ವ್ಯತ್ಯಾಸ ಕಾಣುತ್ತೇವೆ. ಇಂದಿನ ಸ್ಪರ್ಧಾತ್ಮಕ ಸನ್ನಿವೇಶಕ್ಕೆ ತಕ್ಕಂತೆ ಜ್ಞಾನಾರ್ಜನೆ ಮಾಡುವುದರ ಜತೆಗೆ ಇಂದಿನ ವೇಗಕ್ಕೆ ತಕ್ಕಂತೆ ಪ್ರಗತಿಯತ್ತ ಸಾಗಬೇಕಿದೆ ಎಂದರು.

‘ನಾವು ವ್ಯಾಸಂಗ ಮಾಡುವಾಗ ಸರಿಯಾದ ವ್ಯವಸ್ಥೆಯೇ ಇರಲಿಲ್ಲ. ಗ್ರಾಮೀಣ ಪ್ರದೇಶದ ನಮಗೆ ಶಿಕ್ಷಣ ದೊರೆತಿದ್ದೇ ದೊಡ್ಡ ಅಂಶವಾಗಿತ್ತು. ನಮ್ಮ ಕಲಿಕೆಯ ಸಮಯದಲ್ಲಿ ನಿಮ್ಮಂತೆ ವಿವಿಧ ತಿಂಡಿಗಳ ವ್ಯವಸ್ಥೆ ಇರಲಿಲ್ಲ, ನಮ್ಮ ಪೋಷಕರು ನೀಡಿದ ಆ ರಾಗಿ ರೊಟ್ಟಿಯನ್ನು ಬೆಳಿಗ್ಗೆ ತಿಂದು, ಅದನ್ನೆ ಮತ್ತೆ ಮಧ್ಯಾಹ್ನವೂ ತಿನ್ನಬೇಕಾದ ಪರಿಸ್ಥಿತಿ ಇತ್ತು. ಅಂದಿನ ಸರ್ಕಾರಗಳು ಈಗಿನಂತೆ ಸಮವಸ್ತ್ರ, ಬೂಟು, ಲೇಖನ ಸಾಮಗ್ರಿಗಳು ಕೊಡುತ್ತಿರಲಿಲ್ಲ. ಅಂದು ನಮ್ಮ ಪೋಷಕರು ನೀಡುವ ಪೆನ್ಸಿಲ್, ಬಳಪ, ಸ್ಲೇಟ್, ಬ್ಯಾಗ್ ನಮ್ಮ ವ್ಯಾಸಂಗದ ಅವಿಭಾಜ್ಯ ಅಂಗವಾಗಿದ್ದವು’ ಎಂದು ನೆನಪು ಮಾಡಿಕೊಂಡರು.

ಇಂದು ನಮ್ಮ ಸರ್ಕಾರಗಳು ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನು ನೀಡಿದರೂ ಬಹಳಷ್ಟು ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಳ್ಳದೆ ಇರುವುದನ್ನು ನಾವು ನೋಡುತ್ತಿದ್ದೇವೆ. ಈಗಿನಂತೆ ಸವಲತ್ತುಗಳನ್ನು ಲಭಿಸಿದ್ದರೆ ಮತ್ತಷ್ಟು ಸಾಧನೆ ಮಾಡಲು ಅವಕಾಶ ಇರುತ್ತಿತ್ತು ಎಂದು ಹೇಳಿದರು.

ವ್ಯಾಸಂಗದ ದಿನಗಳಲ್ಲಿ ವಾರ್ಷಿಕ ಎರಡು ಕಾರ್ಯಕ್ರಮಗಳು ಇರುತ್ತಿದ್ದವು. ಆದರೆ ಈಗ ಕಾಲೇಜಿನಲ್ಲಿ ಪಠ್ಯ ಚಟುವಟಿಕೆಗಳ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ರೇಂಜರ್ಸ್ ಸೇರಿದಂತೆ ಹಲವು ಚಟುವಟಿಕೆಗಳು ವರ್ಷದ ಎಲ್ಲ ದಿನಗಳು ನಡೆಯುತ್ತಲೇ ಇರುತ್ತವೆ ಎಂದರು.

ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಡಾ. ಗುರುರಾಜ್ ಕೆ. ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಸ್ಫೂರ್ತಿ ಭರತ ನಾಟ್ಯ ಪ್ರದರ್ಶಿಸಿದರು. ಸಹಾಯಕ ಪ್ರಾಧ್ಯಾಪಕ ಡಿ.ಪಿ.ಶಂಕರ್, ರವಿಕುಮಾರ್, ಉಪನ್ಯಾಸಕಿ ವೀಣಾ, ವಿದ್ಯಾರ್ಥಿನಿ ವೈಭವಿ , ಉಪನ್ಯಾಸಕರಾದ ಡಾ.ಮಂಜುರಾಜ್, ಡಾ.ಕುಸುಮ, ಖಲೀದ್ ಆಹ್ಮದ್, ಕೆ.ಎಸ್.ಚಂದ್ರಕಲಾ, ವಿದ್ಯಾ.ಕೆ., ಡಾ. ಯಪ್ಪಪ್ಪ ಹಾಗೂ ನಾಗೇಶ್ ನಾಯಕ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-36-696824925

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.