ಹೊಳೆನರಸೀಪುರ: ನರ್ಸಿಂಗ್ ಸೇವೆಯಲ್ಲಿ ಇರುವಾಗ ಕರ್ತವ್ಯದಲ್ಲಿ ಒಲವು, ಕಲಿಕೆಯ ತುಡಿತದಿಂದ ಗಳಿಸಿದ ಜ್ಞಾನದ ಅನಾವರಣ ಮತ್ತು ಕರ್ತವ್ಯದಲ್ಲಿ ಬದ್ಧತೆ ಹಾಗೂ ನ್ಯಾಯ ಒದಗಿಸುವ ಮನೋಭಾವ ಇದ್ದಲ್ಲಿ ಶುಶ್ರೂಷಕ ವೃತ್ತಿಯಲ್ಲಿ ಆತ್ಮತೃಪ್ತಿ ಮತ್ತು ಸೇವಾ ಕಾರ್ಯದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಜೊತೆಗೆ ಕಲಿತ ವಿದ್ಯೆಯಲ್ಲಿ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ ಎಂದು ಹಾಸನದ ಹಿಮ್ಸ್ ಎಂಸಿಎಚ್ ಯೂರಾಲಜಿ ನಿರ್ದೇಶಕ ಡಾ.ರಾಜಣ್ಣ ಬಿ. ಸಲಹೆ ನೀಡಿದರು.

ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯಲ್ಲಿ ಇರುವ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ ಫ್ಲಾರೆನ್ಸ್ ನೈಟಿಂಗೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಶುಶ್ರೂಷ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಶುಶ್ರೂಷಕ ವೃತ್ತಿಯಲ್ಲಿ ವಿಪುಲ ಅವಕಾಶಗಳಿದ್ದು, ಹಲವಾರು ವಿಭಾಗಗಳಲ್ಲಿ ಶುಶ್ರೂಷಕರ ಸೇವೆ ಅಗತ್ಯವಾಗಿದೆ. ಇವುಗಳಲ್ಲಿ ತೊಡಗಿಸಿಕೊಳ್ಳಲು ಕಲಿಕೆಯಲ್ಲಿ ನೀವು ತೋರುವ ತುಡಿತ ಮತ್ತು ಸಿಕ್ಕ ಅವಕಾಶದಲ್ಲಿ ನಿಮ್ಮ ಜ್ಞಾನದ ಅನಾವರಣ ಪ್ರಮುಖವಾಗಿರುತ್ತದೆ ಎಂದರು.

ಫ್ಲಾರೆನ್ಸ್ ನೈಟಿಂಗೆಲ್ ಅವರು ಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರಿದ್ದ ಬ್ಯಾರಕ್ಗಳಲ್ಲಿ ಕಲುಷಿತ ನೀರು ಮತ್ತು ಕಾಲರಾದಂತಹ ಕಾಯಿಲೆಗಳಿಂದಾಗಿ ಯುದ್ಧಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸುತ್ತಿದ್ದವು. ಒಬ್ಬ ನರ್ಸ್ ಹಾಗೂ ಸಂಖ್ಯಾಶಾಸ್ತ್ರಜ್ಞೆಯಾಗಿದ್ದ ಅವರು, ಅಲ್ಲಿನ ನೈರ್ಮಲ್ಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆ ತರುವ ಮೂಲಕ ನೂರಾರು ಜೀವಗಳನ್ನು ಉಳಿಸಿದರು. ಅವರ ಈ ಮಹತ್ತರ ಕೊಡುಗೆಯಿಂದಾಗಿಯೇ ಅವರನ್ನು ಆಧುನಿಕ ಶುಶ್ರೂಷ ವೃತ್ತಿಯ ತಾಯಿ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ವೈದ್ಯರು ಬಂದು ತಪಾಸಣೆ ನಡೆಸಿ ಹೋದ ನಂತರ, ರೋಗಿಯ ಸಂಪೂರ್ಣ ಜವಾಬ್ದಾರಿ ಮತ್ತು 24 ಗಂಟೆಗಳ ಕಾಲ ಅವರ ಆರೈಕೆ ಮಾಡುವುದು ಶುಶ್ರೂಷಕರೇ ಆಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಒಬ್ಬ ನರ್ಸ್, ವೈದ್ಯರಿಗಿಂತಲೂ ಹೆಚ್ಚಿನ ಜೀವಗಳನ್ನು ಉಳಿಸುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ. ರೋಗಿಯಲ್ಲಿನ ಸಣ್ಣ ಬದಲಾವಣೆಗಳನ್ನು ಗುರುತಿಸಿ ಚಿಕಿತ್ಸೆ ನೀಡುವುದು ಇವರ ಕೈಯಲ್ಲೇ ಇರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರಿ ಶೃಶೂಷ ಕಾಲೇಜಿನ ಪ್ರಾಂಶುಪಾಲೆ ಶೈಲಜಾ ಕೆ.ಜೆ. ಅಧ್ಯಕ್ಷತೆ ವಹಿಸಿದ್ದರು. ಅನುಷ ಎಂ.ಎಸ್. ಪ್ರಾರ್ಥಿಸಿದರು. ಮಹಾಂತೇಶ್ ಸ್ವಾಗತಿಸಿದರು. ರಶ್ಮಿ ಹಾಗೂ ವಿದ್ಯಾ ನಿರೂಪಿಸಿದರು. ಹೇಮಂತ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. .

ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ್ ಹಡಪದ, ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ ಎಸ್ಎನ್ಎ ಸಂಯೋಜಕ ರಾಮು ವಿ.ಎಂ., ವಿದ್ಯಾರ್ಥಿಗಳಾದ ರಂಜಿತಾ, ಅಕ್ಷತಾ, ಸುಮಾ, ಶ್ವೇತಾ, ಬಸವನಗೌಡ ಪಾಟೀಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-36-1763678355

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.