ಹೊಳೆನರಸೀಪುರ: ‘ದೇಶಕ್ಕೆ ತಕ್ಕ ಸಂವಿಧಾನವನ್ನು ಬಿ.ಆರ್.ಅಂಬೇಡ್ಕರ್ ಅವರು ನೀಡಿದ್ದಾರೆ. ಸಾವಿರಾರು ಭಾಷೆ, ಹತ್ತಾರು ಧರ್ಮಗಳನ್ನು ಅನುಸರಿಸುವ ಎಲ್ಲರಿಗೂ ನಮ್ಮ ಸಂವಿಧಾನ ಸಾಮಾಜಿಕ ನ್ಯಾಯ ನೀಡಿದೆ’ ಎಂದು ನ್ಯಾಯಾಧೀಶೆ ನಿವೇದಿತಾ ಮಹಂತೇಶ್ ಮುನವಳ್ಳಿ ಮಠ್ ತಿಳಿಸಿದರು.

ನ್ಯಾಯಾಲಯ ಆವರಣದಲ್ಲಿ ತಾಲ್ಲೂಕು ವಕೀಲರ ಸಂಘ ಬುಧವಾರ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಸಂವಿಧಾನ ನಮಗೆಲ್ಲಾ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಿ ಸಂವಿಧಾನವನ್ನು ಗೌರವಿಸಿ’ ಎಂದರು.

ಶಿಕ್ಷಕ ಎಂ.ಜಿ.ಪರಮೇಶ್ ಮಾತನಾಡಿ, ‘ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಅಸ್ಪೃಶ್ಯತೆ, ಬಡತನ, ಜಾತೀಯತೆಯಿಂದ ಕೂಡಿದ ಕಷ್ಟಕರ ಜೀವನವನ್ನು ಮೆಟ್ಟಿ ನಿಂತು ಸಮಾಜವನ್ನು ಬೆಳಕಿನೆಡೆಗೆ ಕೊಂಡ್ಯೊಯುವ ಕಾರ್ಯ ಮಾಡಿದ ಮಹಾಪುರುಷರು’ ಎಂದರು.

‘ಸಂವಿಧಾನ ದೇಶದ ಸರ್ವತೋಮುಖ ಅಭಿವೃದ್ಧಿಗೆ ಸುಭದ್ರವಾದ ಕಾನೂನು ಹಾಗೂ ನಿಯಮ ರೂಪಿಸಿಕೊಟ್ಟಿದೆ’ ಎಂದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ಸಹಾಯಕ ಸರ್ಕಾರಿ ಅಭಿಯೋಜಕ ಸುನೀಲ್ ಕುಮಾರ್, ವಕೀಲ ಜಯಪ್ರಕಾಶ್ ಮಾತನಾಡಿದರು.

ಸಿವಿಲ್ ನ್ಯಾಯಾಧೀಶೆ ಚೇತನಾ, ಅಪರ ಸಿವಿಲ್ ನ್ಯಾಯಾಧೀಶೆ ಐಶ್ವರ್ಯ ಗುಡದಿನ್ನಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಸುರೇಶ್ ಜಿ.ಎಸ್., ಶಿವಮ್ಮ, ನ್ಯಾಯಾಲಯದ ಸಿಬ್ಬಂದಿ ಗಂಗಾಧರಪ್ಪ, ಡಿ.ಶಿವಮೂರ್ತಿ, ಶ್ವೇತ ಪ್ರಕಾಶ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-36-976401148

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.