ಹೊಳೆನರಸೀಪುರ: ಲಿಂಗಸಮಾನತೆ, ಮಹಿಳಾ ಸಬಲೀಕರಣ ಮತ್ತು ತಾರತಮ್ಯದ ವಿರುದ್ದ ಜಾಗೃತಿ ಮೂಡಿಸುವ ಉದ್ದೇಶದಿಂದ 1975ರಲ್ಲಿ ಮಾರ್ಚ್ 8 ಅನ್ನು ಅಂತರರಾಷ್ಟ್ರೀಯ ಮಹಿಳಾ ದಿನವನ್ನಾಗಿ ಘೋಷಿಸಲಾಯಿತು ಎಂದು ಸರ್ಕಾರಿ ಆಸ್ಪತ್ರೆಯ ಶಸ್ರ ಚಿಕಿತ್ಸಕಿ, ಆಡಳಿತ ವೈದ್ಯಾಧಿಕಾರಿ ಡಾ. ಮಂಜುಳಾ ವಿವರಿಸಿದರು.

ಶುಕ್ರವಾರ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಹಿಂದೆ ಮಹಿಳೆಯರನ್ನು ಮನೆಯಿಂದ ಹೊರಗೆ ಕಳುಹಿಸುತ್ತಿರಲಿಲ್ಲ. ವಿದ್ಯಾಭ್ಯಾಸ ಕೊಡಿಸುತ್ತಿರಲಿಲ್ಲ. ಕಾಲ ಮುಂದುವರಿದಂತೆ ಮಹಿಳೆಯರು ವಿದ್ಯಾವಂತರಾಗಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಅಬಲರಲ್ಲ ಸಬಲರು ಎಂದು ತೋರಿಸಿದ್ದಾರೆ ಎಂದರು.

ಸಹಾಯಕ ಆಡಳಿತ ವೈದ್ಯಾಧಿಕಾರಿ ಚಿನ್ನಮ್ಮ ಮಾತನಾಡಿ, ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಕೆಲವೊಮ್ಮೆ ದೈಹಿಕ ಸಹಜ ವ್ಯತ್ಯಾಸಗಿಳಿಂದ ಸೊರಗಿದಂತೆ ಕಂಡರೂ ತಕ್ಷಣ ಚೇತರಿಸಿಕೊಂಡು ತಮ್ಮ ನಿತ್ಯ ಕರ್ತವ್ಯದಲ್ಲಿ ತೊಡಗಿಸಿಕೊಂಡು ಉತ್ತಮವಾಗಿ ಕೆಲಸ ಮಾಡುತ್ತಾರೆ. ಮಹಾರಾಜರ ಕಾಲದಲ್ಲಿ ಮಹಾರಾಣಿಗೂ ಶಸ್ತ್ರಾಭ್ಯಾಸ ಮಾಡಿಸುತ್ತಿದ್ದರು. ಶಸ್ತ್ರಾಭ್ಯಾಸ ಮಾಡಿದ ಮಹಾರಾಣಿಯರು ಅಗತ್ಯ ಸಮಯದಲ್ಲಿ ಸೇನಾಧಿಪತಿಯಾಗಿ ಸೈನ್ಯವನ್ನು ಮುನ್ನೆಡೆಸಿ ಜಯಗಳಿಸಿ ಸಮರ್ಥರು ಎಂದು ತೋರಿಸಿದ್ದಾರೆ ಎಂದರು.

ಶುಶ್ರೂಷಕ ಅಧೀಕ್ಷಕಿ ಮೀನಾಕ್ಷಿ, ಹಿಂದಿನ ದಿನದಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ ಸೇನೆಯಲ್ಲಿ, ಮದರ್ ತೆರೇಸಾ ಸೇವೆಯಲ್ಲಿ, ಕಲ್ಪನಾ ಚಾವ್ಲಾ ಸಾಧನೆ ಮಾಡಿ ಮಹಿಳೆಯರು ಯಾವುದಕ್ಕೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಮಹಿಳೆ ತಾಯಿಯಾಗಿ, ಅಕ್ಕ ತಂಗಿಯಾಗಿ, ಹೆಂಡತಿಯಾಗಿ, ಶಿಕ್ಷಕಿಯಾಗಿ, ವೈದ್ಯೆಯಾಗಿ, ಶುಶ್ರೂಷಕಿಯಾಗಿ, ಒಳ್ಳೆಯ ಕ್ರೀಡಾಪಟುವಾಗಿ ಪುರುಷರಿಗೆ ಸಮಾನರು ಎನಿಸಿದ್ದಾರೆ ಎಂದರು.

ದಿನಾಚರಣೆ ಅಂಗವಾಗಿ ನಡೆಸಿದ ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು. ಆಡಳಿಯ ವೈದ್ಯಾಧಿಕಾರಿ ಡಾ. ಮಂಜುಳಾ ಆಸ್ಪತ್ರೆಯ ಎಲ್ಲ ಮಹಿಳಾ ವೈದ್ಯರಿಗೆ, ಶುಶ್ರೂಷಕಿಯರಿಗೆ, ಸಿಬ್ಬಂದಿಗೆ ನೆನಪಿನಕಾಣಿಕೆ ನೀಡಿ ಗೌರವಿಸಿದರು. ನಿವೃತ್ತ ಆಡಳಿತಾಧಿಕಾರಿಗಳಾಗಿದ್ದ ಡಾ. ಲಕ್ಷ್ಮೀಕಾಂತ್, ಡಾ. ಧನಶೇಖರ್, ಅರೆವಳಿಕೆ ತಜ್ಞ ವಿಜಯಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ. ಕುಸುಮಾ ಸ್ವಾಗತಿಸಿದರು. ತುಳಸಿಕುಮಾರಿ ವಂದಿಸಿದರು. ವೇದಿಕೆ ಕಾರ್ಯಕ್ರಮದ ನಂತರ ವೈದ್ಯರು ಹಾಗೂ ಸಿಬ್ಬಂದಿ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನಸೆಳೆಯಿತು. ಆಸ್ಪತ್ರೆಯ ಎಲ್ಲ ವೈದ್ಯರು, ಶುಶ್ರೂಷಕಿಯರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-36-1944362731

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.