ಹೊನ್ನಾಳಿ: ‘ನಮ್ಮ ಯುವಪೀಳಿಗೆಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪಿ. ವೀರಣ್ಣ ಪಟ್ಟಣಶೆಟ್ಟಿ ಹೇಳಿದರು.

ಹಿರೇಕಲ್ಮಠದ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

‘ಕೊಪ್ಪಳ ಜಿಲ್ಲೆಯ ಸಂಗೀತಾ ಅವರು ಈ ಬಾರಿಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಅವರನ್ನು ಇಲ್ಲಿಗೆ ಕರೆಸಿ ಸನ್ಮಾನ ಮಾಡುತ್ತಿರುವುದು ಖುಷಿ ಕೊಟ್ಟಿದೆ. ನಮ್ಮ ಈ ಕೆಲಸ ಉಳಿದವರಿಗೆ ಪ್ರೇರಣೆಯಾಗಲಿ. ನಮ್ಮ ಸಮಾಜದ ನೂರಾರು ಯುವಕರು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ ಕೀರ್ತಿ ನಮ್ಮ ಕಣ್ಣಮುಂದಿದೆ’ ಎಂದರು.

ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಎಂ. ಬೇವಿನಮರದ ಮಾತನಾಡಿ, ‘ರಾಣಿ ಅಬ್ಬಕ್ಕ ದೇವಿ ಪ್ರಶಸ್ತಿ ನೀಡಿದಂತೆ, ವೀರವನಿತೆ ಬೆಳವಾಡಿ ಮಲ್ಲಮ್ಮ ಅವರ ಹೆಸರಿನಲ್ಲಿ 5 ಪ್ರಶಸ್ತಿಗಳನ್ನು ಸ್ಥಾಪಿಸಿ ನಮ್ಮ ಪ್ರಾಧಿಕಾರದಿಂದ ನೀಡಲಾಗುವುದು’ ಎಂದರು.

ವೈದ್ಯ ರಾಜ್ಕುಮಾರ್ ಮಾತನಾಡಿ, ‘ಹೊನ್ನಾಳಿ ತಾಲ್ಲೂಕಿನ ಪಂಚಮಸಾಲಿ ಸಮಾಜವು ಪಾರದರ್ಶಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಮುಂಚೂಣಿಯಲ್ಲಿದೆ’ ಎಂದು ಶ್ಲಾಘಿಸಿದರು.

ದಾವಣಗೆರೆಯ ಮಕ್ಕಳ ತಜ್ಞರಾದ ಸುಧಾ ಸಿ. ಪಾಟೀಲ್, ರಾಜು ವಿ. ಮೋತಿ ಮಾತನಾಡಿದರು.

ಡಾ. ದೀಪಕ್ ಬಿ. ಉಪ್ಪಿನ್, ವೀರಣ್ಣ ಪಟ್ಟಣಶೆಟ್ಟಿ, ಎಚ್.ಪಿ. ದಿನೇಶ್, ಕುಂಕೋದ್ ಸೋಮಶೇಖರಪ್ಪ, ಸಿದ್ದೇಶ್ ನಾಡಿಗ್ ಹಾಗೂ ಎಸ್ಎಸ್ಎಲ್ಸಿ, ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿನಿ ಸಂಗೀತಾ, ಉಪನ್ಯಾಸಕ ಎಚ್.ಬಿ. ಅಶೋಕ್, ನ್ಯಾಮತಿಯ ಚಂದ್ರಶೇಖರ್ ಪೂಜಾರ್, ಶಿಲ್ಪಾ ರಾಜುಗೌಡ, ಹಾಲೇಶ್ ಕುಂಕೋದ್ ಉಪಸ್ಥಿತರಿದ್ದರು. ಸುಮಾ ರವಿಕುಮಾರ್, ಗಿರೀಶ್ ನಾಡಿಗ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-43-2089055247

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.