ಹಿರೀಸಾವೆ: ಬೆಂಗಳೂರಿನ ಅವ್ಯಂಗ್ ಫೌಂಡೇಷನ್ ಮತ್ತು ಸಿರಿ ಕರ್ನಾಟಕ ಸಂಸ್ಥೆಯ 35 ಕಲಾವಿದರು ಹೋಬಳಿಯ ಹೊನ್ನಮಾರನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಇತ್ತೀಚೆಗೆ ಬಣ್ಣ ಬಳಿದು, ಆಕರ್ಷಕ ಚಿತ್ರಗಳನ್ನು ಬರೆದು ರಂಗು ತುಂಬಿದ್ದಾರೆ.

ಬೆಂಗಳೂರಿನ ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತಿರುವ ಯುವಕರು ತಂಡವು ರಜಾ ದಿನಗಳಲ್ಲಿ ಗ್ರಾಮೀಣಾ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಈ ಕಾರ್ಯವನ್ನು ಮಾಡುತ್ತಿದೆ. ಕಲಾವಿದರು ಗೋಡೆಗಳಿಗೆ ಸುಣ್ಣ, ಬಣ್ಣ ಬಳಿದು ನಂತರ ಪರಿಸರದಲ್ಲಿನ ಗಿಡ ಮರ, ಪ್ರಾಣಿಗಳು, ವಿಜ್ಞಾನ, ಇತಿಹಾಸವನ್ನು ತಿಳಿಸುವ ಚಿತ್ರಗಳು ಸೇರಿದಂತೆ ಭಾರತಿಯ ಸಂಸ್ಕೃತಿ, ಜಾನಪದ ನೃತ್ಯ, ಮಾನವೀಯ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಹಲವು ಆಕರ್ಷಣೀಯ ಚಿತ್ರಗಳನ್ನು ಬರೆದರು.

ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕಳೆದ ವರ್ಷ ಈ ಸಂಸ್ಥೆಯವರಿಗೆ ಮನವಿ ಮಾಡಿದ್ದೆವು. ಮೂರು ದಿನ ಕಲಾವಿದರು ಒಳ್ಳೆಯ ಚಿತ್ರಗಳನ್ನು ಬರೆದು, ಶಾಲೆಯನ್ನು ಶೃಂಗಾರ ಮಾಡಿದ್ದಾರೆ ಎಂದು ಮುಖ್ಯಶಿಕ್ಷಕಿ ಮಾಲತಿ ಹೇಳಿದರು. ಅವ್ಯಂಗ್ ಫೌಂಡೇಶನ್ ನಿರ್ದೇಶಕ ಮಧು, ಸಂಸ್ಥೆಯ ಮುಖ್ಯಸ್ಥರಾದ ಅಶ್ವಿನಿ ರಾಜನ್, ಶ್ವೇತ, ಸಂಪ್ರೀತ್ ಎಸ್ಡಿಎಂಸಿಯವರು, ದಿನೇಶ್ ಸೇರಿದಂತೆ ಗ್ರಾಮಸ್ಥರು ಕಲಾವಿದರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದರು.

ಶಾಲೆ 1ರಿಂದ: ಶಾಲೆಗಳಲ್ಲಿ 29ರಂದು ಸ್ವಚ್ಛತಾ ಕಾರ್ಯ ನಡೆಯಲಿದೆ. ಎಲ್ಲಾ ಶಾಲೆಗಳಿಗೆ ತರಗತಿ ಅನುಸಾರ ಪಠ್ಯ ಪುಸ್ತಕಗಳನ್ನು ಶಿಕ್ಷಕರಿಗೆ ಇಲಾಖೆ ವತಿಯಿಂದ ಹಂಚಿಕೆ ಮಾಡಲಾಗಿದೆ. ಜೂನ್ 1 ರಂದು ಶಿಕ್ಷಕರು, ಎಸ್ಡಿಎಂಸಿಯವರು ಮಕ್ಕಳನ್ನು ಶಾಲೆಗೆ ಸ್ವಾಗತಿಸಿ, ಸಿಹಿ ನೀಡಿ, ಪುಸ್ತಕಗಳನ್ನು ವಿತರಿಸಲಿದ್ದಾರೆ ಎಂದು ಹೋಬಳಿಯ ಶಿಕ್ಷಣ ಸಂಯೋಜಕ ಶ್ರೀನಿವಾಸ್ ‘ಪ್ರಜಾವಾಣಿ’ಗೆ ಬಧವಾರ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-36-940057882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.