ಹೊನ್ನಾವರ: ‘ಮಹಿಳೆಯರನ್ನು ಸಮಾನತೆ ಹಾಗೂ ಗೌರವದಿಂದ ನಡೆಸಿಕೊಳ್ಳಬೇಕು’ ಎಂದು ಕವಿ ಮಾಧವಿ ಭಂಡಾರಿ ಹೇಳಿದರು.

ಮಹಿಳಾ ದಿನಾಚರಣೆ ಅಂಗವಾಗಿ ಸಾಹಿತಿ ಡಾ.ಎಚ್.ಎಸ್.ಅನುಪಮಾ ನೇತೃತ್ವದ ಸಮತಾ ಬಳಗದಿಂದ ಕವಲಕ್ಕಿಯಲ್ಲಿ ಭಾನುವಾರ ನಡೆದ ‘ಮಹಿಳಾ ಚೈತನ್ಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತೀಕ್ಷಾ ಚಿಕ್ಕನಕೋಡ ಅವರ ಚಿತ್ರ ಪ್ರದರ್ಶನ ಉದ್ಘಾಟಿಸಿದ ಇಂಗ್ಲಿಷ್ ಉಪನ್ಯಾಸಕಿ ವೃಂದಾ ಹೆಗಡೆ ಹಾಗೂ ಅವರ ಪತಿ ಸುಬ್ರಾಯ ಹೆಗಡೆ ಮಾತನಾಡಿದರು.

ಆಶಾ ಕಾರ್ಯಕರ್ತೆ ಅರುಣ ಮಡಿವಾಳ, ಚಿತ್ರ ಕಲಾವಿದೆ ಪ್ರತೀಕ್ಷಾ ಚಿಕ್ಕನಕೋಡ, ವಾಹನ ಚಾಲನಾ ತರಬೇತಿ ಸಂಸ್ಥೆಯ ಶಾರದಾ ಕೆರಕೋಣ, ಗೃಹಿಣಿ ಶೈಲಾ ಕರ್ಕಿ, ದರ್ಜಿ ಸುಮಂಗಲಾ, ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಮಂಗಳಾ ಪಟಗಾರ, ವಕೀಲೆ ಸರೋಜಾ ಎಂ.ಎಸ್. ಮಾತನಾಡಿದರು.

ಪವಿತ್ರಾ ಚಿಕ್ಕನಕೋಡ ಅವರ ‘ಯಾರಿಗ್ ಬೇಕು ಯುದ್ಧ, ಸಾಕು ನಿಲ್ಸಿ’ ಏಕವ್ಯಕ್ತಿ ಪ್ರದರ್ಶನ, ಕೃತಿ ಬಂಟ್ವಾಳ ಪ್ರದರ್ಶಿಸಿದ ‘ಸಮತೆಯೆಡೆಗೆ’ ರಂಗರೂಪಕ, ಸ್ಥಳೀಯ ಮಹಿಳೆಯರಿಂದ ನಡೆದ ವಿವಿಧ ಮನರಂಜನಾ ಕಾರ್ಯ ಕ್ರಮ ಪ್ರೇಕ್ಷಕರಿಗೆ ಮುದ ನೀಡಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-20-1684722682

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.