ಹೊಸಕೋಟೆ: ಪದವಿ ವಿದ್ಯಾಭ್ಯಾಸ ಮುಗಿಸಿದ ತಕ್ಷಣ ಉದ್ಯೋಗ ಸಿಗಬೇಕು ಎಂಬ ಅಶಯದಿಂದ ಪ್ರತಿ ಕಾಲೇಜಿನ ವಿದ್ಯಾರ್ಥಿಗೂ ವೃತ್ತಿಪರ ಶಿಕ್ಷಣ ನೀಡುವ ನಿಟ್ಟಿನಲ್ಲಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನಿಂದ ₹1750 ಕೋಟಿ ಸಾಲ ಹಾಗೂ ₹750 ಕೋಟಿ ರಾಜ್ಯ ಸರ್ಕಾರದ ಅನುದಾನದಲ್ಲಿ ಈ ವರ್ಷದ ಡಿಸೆಂಬರ್ ವೇಳೆಗೆ ಲ್ಯಾಬ್ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನೆ ಮತ್ತು ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪದವಿ ಹಂತದ ವಿದ್ಯಾರ್ಥಿಗಳಿಗೆ ಇನ್ಮುಂದೆ ಹಾಜರಾತಿ ಕಡ್ಡಾಯ. ಆದರೆ, ಬಯೋಮೆಟ್ರಿಕ್ ಇರಬೇಕಾ ಅಥವಾ ಬೇಡವಾ ಎಂಬುದರ ಕುರಿತು ಇಲಾಖಾ ಹಂತದಲ್ಲಿ ಚರ್ಚೆಯಲ್ಲಿದೆ. ಮುಂದಿನ ದಿನಗಳಲ್ಲಿ ಅದನ್ನು ಪರಿಶೀಲಿಸಲಾಗುವುದು. ಸಾರ್ವಜನಿಕ ವಲಯದಿಂದ ಸಂಯೋಜಿತ ಕೋರ್ಸ್ ಆರಂಭಿಸುವಂತೆ ಕೂಗು ಕೇಳಿ ಬರುತ್ತಿರುವ ಕಾರಣ ಸದ್ಯ 50 ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡಿರುವುದನ್ನು ಮುಂದಿನ ದಿನಗಳಲ್ಲಿ ಮತಷ್ಟು ಕಾಲೇಜುಗಳಿಗೆ ವಿಸ್ತರಿಸಲಾಗುವುದು ಎಂದರು.

ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅನ್ನು ಘಟಕ ಕಾಲೇಜನ್ನಾಗಿ ಉನ್ನತೀಕರಿಸಲಾಗಿದೆ. ಕಾಲೇಜಿನ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣಕ್ಕೆ ₹1ಕೋಟಿ ಬಿಡುಗಡೆ ಮಾಡಲಾಗಿದೆ. ಹೊಸ ಡೆಸ್ಕ್ ಬೇಡಿಕೆಗೆ ಪಟ್ಟಿ ಸಲ್ಲಿಸಿ ಎಂದು ಪ್ರಾಂಶುಪಾಲರಿಗೆ ಸೂಚಿಸಿದರು.

ಶಾಸಕ ಶರತ್ ಬಚ್ಚೆಗೌಡ, ರಾಜ್ಯದಲ್ಲೇ ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಅನ್ನು ಮೊದಲ ಮಾದರಿ ಕಾಲೇಜು ಆಗಿರುವುದು ಸಂತಸದ ಸಂಗತಿ. ರಾಜ್ಯದಲ್ಲೇ ಪರಿಸರ ಸ್ನೇಹಿ ಮೊದಲ ಮಹಿಳಾ ಶೌಚಾಲಯ ಇರುವುದು ಇದೇ ಕಾಲೇಜಿನಲ್ಲಿ ಎಂದರು.

ತಾಲ್ಲೂಕಿನ ಗ್ರಾಮೀಣ ಭಾಗದ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಅನುಕೂಲವಾಗಲೆಂದು ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಕೇಂದ್ರದ ಜತೆ ಒಡಂಬಡಿಕೆ ಮಾಡಿಕೊಂಡು ಉಚಿತ ತರಬೇತಿ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗದ ಜೊತೆ ಶಿಕ್ಷಣಕ್ಕೆ ಅನುಕೂಲವಾಗಲೆಂದು ಹೊಸಕೋಟೆ ನಗರಕ್ಕೆ ಸಂಜೆ ಕಾಲೇಜು ಮಂಜೂರು ಮಾಡುವಂತೆ ಉನ್ನತ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು.

ಪ್ರಾಂಶುಪಾಲರಾದ ರಾಮಲಿಂಗಪ್ಪ ಟಿ.ಬೇಗೂರು, ಪ್ರಾಧ್ಯಾಪಕರಾದ ಡಾ.ಈರಣ್ಣ, ವಿಶ್ವೇಶ್ವರಯ್ಯ, ವೀರಭದ್ರಯ್ಯ, ಗಾಯಿತ್ರಿ, ಕಾಲೇಜು ಅಭಿವೃದ್ದಿ ಸಮಿತಿಯ ಸುರೇಶ್ ವೆಂಕಟರಾಮಪ್ಪ, ಗೌತಮ್ ಎಚ್.ಆರ್., ಸುಭಾಷ್ ಗೌಡ, ಜಿ.ಎನ್ ಸೋಮಶೇಖರ್ ಗೌಡ, ಸೌಮ್ಯಮಧು, ಮುನೇಗೌಡ ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-15-391336732

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.