ಹೊಸದುರ್ಗ: ‘ವಿದ್ಯಾರ್ಥಿಗಳು ಕೇವಲ ಓದಿಗೆ ಮಾತ್ರ ಸೀಮಿತವಾಗಬಾರದು. ಓದಿನ ಜೊತೆಗೆ ಇತರೆ ಜ್ಞಾನ ಹಾಗೂ ಕೌಶಲಗಳನ್ನು ರೂಢಿಸಿಕೊಳ್ಳಬೇಕು’ ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಆರ್.ಶಾಂತಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆಯ ರಾಜ್ಯ ಘಟಕದ ವತಿಯಿಂದ ಪಟ್ಟಣದ ಕನ್ನಡ ಭವನದಲ್ಲಿ ಗುರುವಾರ ಆಯೋಜಿಸಿದ್ದ ಚಿತ್ರದುರ್ಗ ಮತ್ತು ದಾವಣಗೆರೆ ಅಂತರ್ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಕೆಲವು ವರ್ಷಗಳ ಹಿಂದೆ ಎಸ್ಎಸ್ಎಲ್ಸಿ ಮುಗಿದ ಮೇಲೆ ಸರ್ಕಾರಿ ಹುದ್ದೆಗಳನ್ನು ಕೊಡಲಾಗುತ್ತಿತ್ತು. ಪ್ರಸ್ತುತ ಪದವಿ ಬಳಿಕ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ನೌಕರಿ ಪಡೆಯಬೇಕಾಗಿದೆ. ಈ ಕಾಲಘಟ್ಟದಲ್ಲಿ ಪಿಎಚ್.ಡಿ ಮಾಡಿದ ಸಾಕಷ್ಟು ಯುವಕರು ಮನೆಯಲ್ಲಿ ಹೈನುಗಾರಿಕೆ ಮತ್ತಿತರ ವೃತ್ತಿಪರ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಎಲ್ಲರೂ ಕೌಶಲಗಳನ್ನು ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

‘ಸಂಘಟನೆ ಮಾಡಿ ಸಮಾಜಮುಖಿಯಾದ ಕೆಲಸ ಮಾಡುವುದು ಸುಲಭದ ಮಾತಲ್ಲ. ಸಂಘಟಕರಿಗೆ ಎಲ್ಲವನ್ನೂ ತಾಳ್ಮೆಯಿಂದ ಸಹಿಸಿಕೊಂಡು ಸಮಾಜವನ್ನು ಮುನ್ನಡೆಸುವ ಬುದ್ಧಿವಂತಿಕೆ ಇರಬೇಕು’ ಎಂದು ಕನಕ ವಿದ್ಯಾ ಸಂಸ್ಧೆಯ ಸಂಸ್ಧಾಪಕ ಎಂ.ಎಚ್. ಕೃಷ್ಣಮೂರ್ತಿ ತಿಳಿಸಿದರು.

‘ವಿದ್ಯಾರ್ಥಿಗಳಿಗೆ ಬಹುಮುಖ ಪ್ರತಿಭೆಯಿದ್ದರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ಅಂಕಗಳ ಜೊತೆಗೆ ವಿವಿಧ ಚಟುವಟಿಕೆಗಳನ್ನು ಬೆಳೆಸಿಕೊಂಡರೆ ಸರ್ವೋತೋಮುಖ ಪ್ರಗತಿ ಕಾಣಬಹುದು’ ಎಂದು ವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆಯ ರಾಜ್ಯ ಘಟಕದ ಸಂಸ್ಥಾಪಕ ಅಧ್ಯಕ್ಷ ನಾಗತಿಹಳ್ಳಿ ಮಂಜುನಾಥ್ ಹೇಳಿದರು.

ರಾಜ್ಯ ವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆಯ ಅಧ್ಯಕ್ಷ ಲಕ್ಷ್ಮಿ ಸಾಗರ್, ಕಾರ್ಯದರ್ಶಿ ಗೊರವಿನಕಲ್ಲು ಚಿದಾನಂದ, ಸೇನಾ ಪಡೆಯ ನಿರ್ದೇಶಕರಾದ ರಾಜು ಬುಳಸಾಗರ, ಪುನೀತ್ಕುಮಾರ್, ಬೀಡಾ ರವಿಕುಮಾರ್, ಮುಖಂಡರಾದ ಎನ್.ಕೆ. ತಿಪ್ಪೇಸ್ವಾಮಿ, ಚೈತ್ರಾ, ಕೆಂಕೆರೆ ಅಂಜನಮೂರ್ತಿ, ಜಾನಕಲ್ಲು ಎಚ್. ಹನುಮಂತಪ್ಪ, ಸ್ಟುಡಿಯೊ ಬಸವರಾಜ್ ಸೇರಿದಂತೆ ಸಮಾಜದ ಮುಖಂಡರು, ವಿದ್ಯಾರ್ಥಿಗಳು ಹಾಗೂ ಪೋಷಕರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-44-1152293721

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.