ಹೊಸನಗರ: ಕಸಾಪ ತಾಲ್ಲೂಕು ಘಟಕ ಹಾಗೂ ಪುಸ್ತಕ ಪ್ರಾಧಿಕಾರದ ಆಶ್ರಯದಲ್ಲಿ ಸಾಹಿತಿ, ನಿಟ್ಟೂರು ಸಮೀಪದ ಸಿಡ್ಲಕುಣಿ ನಿವಾಸಿ ಪಿ. ಶಾಂತರಾಮ ಪ್ರಭು ಅವರ ಮನೆಯಲ್ಲಿ ಈಚೆಗೆ ‘ಮನೆಗೊಂದು ಗ್ರಂಥಾಲಯ’ ಎಂಬ ವಿಭಿನ್ನ ಕಾರ್ಯಕ್ರಮ ನಡೆಯಿತು.

‘ಶಾಂತರಾಮ ಪ್ರಭು ಅವರು ಪುಸ್ತಕಗಳನ್ನು ಸಂಗ್ರಹಿಸುವ ಜೊತೆಗೆ ಅವುಗಳ ಅಧ್ಯಯನ ನಡೆಸಿದ್ದಾರೆ. ಅವರ ಮನೆಯ ಗ್ರಂಥಾಲಯ ನೋಡಿದಾಗ ನನಗೆ ಓಶೋ ನೆನಪಾಗುತ್ತಾರೆ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಚಿಂತಕ ಅಂಬ್ರಯ್ಯ ಮಠ ಹೇಳಿದರು.

‘ಬಾಲ್ಯದಿಂದಲೂ ವಾರ ಪತ್ರಿಕೆ, ಮಾಸ ಪತ್ರಿಕೆ, ದಿನಪತ್ರಿಕೆಗಳನ್ನು ಸಂಗ್ರಹಿಸುವ ಹವ್ಯಾಸ ಇದೆ. ಪುಸ್ತಕ ಸಂಗ್ರಹಕ್ಕೆ ಹಣಕಾಸಿನ ತೊಂದರೆ ಅಗಿಲ್ಲ’ ಎಂದು ಸಾಹಿತಿ ಪಿ. ಶಾಂತರಾಮ ಪ್ರಭು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಶಾಂತರಾಮ ಪ್ರಭು ಅವರೊಂದಿಗೆ ಸಂವಾದ ನಡೆಯಿತು. ಮಾರ್ಷಲ್ ಶರಾಂ, ಹನಿಯ ರವಿ, ಲಕ್ಷ್ಮೀನಾರಾಯಣ ದೊಡ್ಡಮನೆ, ನಾರಾಯಣ ಕಾಮತ್, ಕೆ.ಜಿ. ನಾಗೇಶ್, ಅಶ್ವಿನಿ ಪಂಡಿತ್, ಜಿ.ಎನ್. ಬಸಪ್ಪ ಗೌಡ, ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಭಟ್, ಕುಮಾರಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-42-1148360899

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.