ಹೊಸಪೇಟೆ: ನೂರು ವರ್ಷಗಳ ಹಿಂದೆಯೇ ಬರಗಾಲ ಬಂದಿದ್ದಾಗ ಉದಾರವಾಗಿ ದಾಸೋಹ ನಡೆಸಿದ ಉದ್ಯಮಿ ನಮ್ಮೊಂದಿಗಿದ್ದರು. ಸಮಾಜಕ್ಕೆ ಸ್ಪೂರ್ತಿಯಾಗುವಂತಹ ಹೆಣ್ಣು ಮಕ್ಕಳೂ ಇಲ್ಲಿದ್ದರು. ಇವರಿಬ್ಬರನ್ನೂ ಲೋಕಕ್ಕೆ ಪರಿಚಯಿಸುವ ಉತ್ತಮ ಕೆಲಸ ನಡೆದಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕ ಪ್ರೊ.ಅಮರೇಶ್ ಯತಗಲ್ ಹೇಳಿದರು.

ಇಲ್ಲಿನ ಎಸ್ಬಿಬಿಎನ್ ಶಿಕ್ಷಣ ಕಾಲೇಜಿನಲ್ಲಿ ಶನಿವಾರ ಸಾಹಿತಿ ಮೃತ್ಯುಂಜಯ ರುಮಾಲೆ ಅವರು ರಚಿಸಿರುವ ಎರಡು ಕೃತಿಗಳಾದ ‘ಶರಣ ಸಕ್ಕರೆ ಕರಡೆಪ್ಪನವರು’ ಮತ್ತು ‘ಕುಡುತಿನಿ ಸಾಹುಕಾರ ಎಣ್ಣೆ ವೀರಮ್ಮ’ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

‘ಮೃತ್ಯುಂಜಯ ರುಮಾಲೆ ಅವರು ಬದುಕು ಮತ್ತು ಬರಹವನ್ನು ಏಕರೂಪವಾಗಿ ಕಂಡು ಬದುಕಿ ಕನ್ನಡ ಸಾರಸ್ವತ ಲೋಕಕ್ಕೆ ಹತ್ತಾರು ಸಂಶೋಧನಾ ಕೃತಿಗಳನ್ನು, ವ್ಯಕ್ತಿ ಚರಿತ್ರೆಗಳನ್ನು, ಜೀವನ ಚರಿತ್ರೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಬಳ್ಳಾರಿ ಜಿಲ್ಲೆಯ ಸಾಹಿತ್ಯ ಸಾಂಸ್ಕೃತಿಕ ಲೋಕವನ್ನು ಅರಿಯಲು ರುಮಾಲೆಯವರ ಕೃತಿಗಳು ಅತ್ಯಂತ ಪ್ರಮುಖವಾಗಿವೆ’ ಎಂದರು.

ಶರಣ ಸಕ್ಕರೆ ಕರಡೆಪ್ಪನವರ ಕೃತಿಯ ಕುರಿತು ಬಳ್ಳಾರಿಯ ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷ ಸಿದ್ಧರಾಮ ಕಲ್ಮಠ ಮಾತನಾಡಿದರು. ‘ಬಳ್ಳಾರಿ ಜಿಲ್ಲೆಯ ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿಗಳ ಕಚೇರಿಯಂತಹ ಹಲವಾರು ಕಟ್ಟಡಗಳನ್ನು ಒಬ್ಬ ಗುತ್ತಿಗೆದಾರರಾಗಿ ನಿರ್ಮಿಸಿದ ಕರಡೆಪ್ಪನವರು, ಬರಗಾಲದಂತ ಸಂದರ್ಭದಲ್ಲಿ ಸಾವಿರಾರು ಜನರಿಗೆ ವರ್ಷಗಳ ಕಾಲ ದಾಸೋಹ ಸೇವೆಯನ್ನು ಮಾಡಿದರು. ಮರಿ ಶಿವಯೋಗಿಗಳ ಶಿಷ್ಯನಾಗಿ ದಾಸೋಹ ಕಾಯಕ ನಡೆಸಿಕೊಂಡು ಬಂದು ತನ್ನೆಲ್ಲ ಸಂಪತ್ತನ್ನ ಸಮಾಜಕ್ಕೆ ನೀಡಿದವರು’ ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಸಾರಾಂಗದ ಸಹಾಯಕ ಕುಲಸಚಿವ ಎಂ.ಎಂ.ಶಿವಪ್ರಕಾಶ್ ಕುಡುತಿನಿ ಸಾಹುಕಾರ ಎಣ್ಭೆ ವೀರಮ್ಮ ಕೃತಿಯ ಕುರಿತು ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ನಂದಿಪುರ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಮೃತ್ಯುಂಜಯ ರುಮಾಲೆ ಅವರು ಇಂತಹ ಹಲವಾರು ಸಂಶೋಧನಾತ್ಮಕ, ವಿಶೇಷ ವ್ಯಕ್ತಿ ಚರಿತ್ರೆಗಳನ್ನು ಬರೆದು ಇಂದಿನ ತಲೆಮಾರಿಗೆ ನೂರಾರು ವರ್ಷಗಳ ಹಿಂದಿನ ಸಾಂಸ್ಕೃತಿಕ ಸಂದರ್ಭವನ್ನು ಅರಿಯುವಂತೆ ಮಾಡಿದ್ದಾರೆ ಎಂದರು.

ಎಸ್ಬಿಬಿಎನ್ ಶಿಕ್ಷಣ ಕಾಲೇಜಿನ ಅಧ್ಯಕ್ಷ ನಾಗರಾಜ್ ಗುಡೇಕೋಟೆ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕ ಪ್ರಕಟಿಸಿದ ಸತ್ಸಂಗ ಆಶ್ರಮದ ಪಲ್ಲೇದ್ ಪಂಪಾಪತಿ, ಅಮ್ಮ ಪ್ರಕಾಶನದ ಎಂಪಿಎಂ ಮಂಜುನಾಥ್, ಬಸವ ಬಳಗದ ಉಪಾಧ್ಯಕ್ಷ ಮಧುರಚನ್ನ ಶಾಸ್ತ್ರಿ, ಗೊಗ್ಗ ಚೆನ್ನಬಸಯ್ಯ. ಕೋರಿ ಶೆಟ್ಟಿ ಲಿಂಗಪ್ಪ, ಶಿವನಗೌಡ ಸಾತ್ನೂರ್, ವಿಜಯನಗರ ಪ್ರತಿಷ್ಠಾನದ ಅಧ್ಯಕ್ಷ ಪಿ. ದಿವಾಕರ್ ನಾರಾಯಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-25-1377586694

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.