ಹೊಸಕೋಟೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ವಿಶೇಷ ಉಪನ್ಯಾಸ ಮತ್ತು ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಕಾಲೇಜಿಗೆ ಗೈರು ಹಾಜರಾಗದಂತೆ ಕಾಲೇಜಿನ ಪಾಠ ಪ್ರವಚನಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡ ವಿದ್ಯಾರ್ಥಿಗಳಾದ ಎಂ.ಚಂದು, ಎನ್. ಯಶಸ್ವಿನಿ, ಎಂ.ಚಂದನ್, ಐಶ್ವರ್ಯ, ಎಂ.ಕೀರ್ತಿ, ಎಸ್.ಬಸವರಾಜ, ಎಂ.ಭೂಮಿಕ, ಮನೋಹರ್, ಆರ್ಯ, ಜಯಲಲಿತ, ಇಮ್ರಾನ್, ನಳಿನ, ಬಾಬು, ಎಸ್.ಮಹಾಲಕ್ಷ್ಮಿ, ಗೌರಮ್ಮ, ಬಿ.ಎಂ.ಸಂಗೀತ, ಎಂ.ದಿವ್ಯ, ಬಿ.ಅನುಷಾ, ಅಭಿಲಾಷ್, ಜಿ.ಸಂಗೀತ ಅವರಿಗೆ ₹1.5 ಲಕ್ಷ ಮೊತ್ತದ ನಗದು ಹಣವನ್ನು ಹಂಚಿಕೆ ಮಾಡಲಾಯಿತು.

‘ಹದಿಹರೆಯದ ನಿರ್ವಹಣೆ’ ಕುರಿತು ಉಪನ್ಯಾಸ ನೀಡಿದ ಲೇಖಕಿ ಡಾ.ಎನ್. ಗಾಯಿತ್ರಿ, ಇಂದಿನ ಯುವಜನತೆ ವಯೋಸಹಜ ಲೈಂಗಿಕ ಆಕರ್ಷಣೆಗಳ ಕಡೆ ಹೆಚ್ಚಿನ ಗಮನ ಕೊಡದೆ ಜೀವನ ಕಟ್ಟಿಕೊಳ್ಳುವ ಕಡೆ ಹೆಚ್ಚಿನ ಗಮನ ಕೊಡಬೇಕು. ಖಚಿತ ಗುರಿ ಇರಿಸಿಕೊಂಡು ಅವುಗಳನ್ನು ಬೆನ್ನಟ್ಟಬೇಕು ಎಂದರು.

ಸಾಮಾಜಿಕ ಜಾಲತಾಣ ಬಳಕೆ ಚಟ ಆಗಬಾರದು. ಅವುಗಳನ್ನು ಶಿಕ್ಷಣದ ಸಾಧನವಾಗಿ ಬಳಸುವುದನ್ನು ಕಲಿಯಬೇಕು. ತಂದೆ–ತಾಯಿ, ಕುಟುಂಬ, ಸಮಾಜ ಹೆಮ್ಮೆ ಪಡುವ ಹಾಗೆ ಬದುಕಬೇಕು ಎಂದರು.

ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವ ಕುರಿತು ಉಪನ್ಯಾಸ ನೀಡಿದ ಚಿಂತಕ ಡಾ. ಜಿ.ರಾಮಕೃಷ್ಣ, ಪ್ರಕೃತಿಕ ನಿಯಮನುಸಾರ ನಿಸರ್ಗದಲ್ಲಿ ಎಲ್ಲವೂ ಘಟಿಸುತ್ತದೆ. ಆದರೆ ಅದರ ಮೇಲೆ ಮನುಷ್ಯ ತನ್ನ ಹಿಡಿತ ಸಾಧಿಸುವ ಯತ್ನ ಎಂದಿಗೂ ಸಾಫಲ್ಯವೂ, ಪ್ರಯೋಜನವೂ ಇಲ್ಲ ಎಂಬುದನ್ನು ಮರೆಯುತ್ತಿದ್ದಾನೆ ಎಂದು ತಿಳಿಸಿದರು.

‘ನಮ್ಮ ಸುತ್ತಣ ಘಟನೆಗಳು ಹೇಗೆ, ಯಾಕೆ ಘಟಿಸುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ ಪರಿಹಾರ ಹುಡುಕಲು ಮುಂದಾಗುವುದು ವೈಚಾರಿಕತೆಯಲ್ಲ. ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ ಎಂಬ ಪ್ರಾಯೋಗಿಕ ವಿಚನೆಯನ್ನು ಒಡಮುಡಿಸಿಕೊಂಡಾಗ ಮಾತ್ರ ವಿವೇಕದ ವೈಚಾರಿಕತೆ ಫಲಿಸುತ್ತದೆ’ ಎಂದು ಹೇಳಿದರು.

ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಪ್ರಾಂಶುಪಾಲ ಡಾ ರಾಮಲಿಂಗಪ್ಪ ಟಿ. ಬೇಗೂರು ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-15-1493445451

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.