ಹೊಸಪೇಟೆ (ವಿಜಯನಗರ): ವಿಲಿಯಂ ಶೇಕ್ಸ್ಪಿಯರ್ ಅವರ 462ನೇ ಜನ್ಮದಿನದ ಅಂಗವಾಗಿ ನಗರದ ವಿಜಯನಗರ ಕಾಲೇಜ್ನ ಆಂಗ್ಲ ಭಾಷಾ ವಿಭಾಗದಿಂದ ಬುಧವಾರ ‘ಸಾಹಿತ್ಯ ಕಲೆ ಮತ್ತು ಪುಸ್ತಕ ಪ್ರದರ್ಶನ’ ಹಮ್ಮಿಕೊಳ್ಳಲಾಯಿತು.

ವಿದ್ಯಾರ್ಥಿಗಳ ಸೃಜನಾತ್ಮಕತೆ ಮತ್ತು ಸಾಹಿತ್ಯಾಸಕ್ತಿಯನ್ನು ಉತ್ತೇಜಿ ಸುವ ಉದ್ದೇಶದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಕಾಲೇಜ್ನ ಅಧ್ಯಕ್ಷ ಮಲ್ಲಿಕಾರ್ಜುನ ಮೆಟ್ರಿ ಮತ್ತು ಪ್ರಾಂಶುಪಾಲ ಮಹಾಂತೇಶ್ ಎನ್. ಆರಾಧ್ಯಮಠ ಅವರು ‘ಗ್ಲೋಬ್ ಥಿಯೇಟರ್’ ಕಲಾಕೃತಿಯನ್ನು ಅನಾವರಣಗಳಿಸುವ ಮೂಲಕ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಕವನ ರಚನೆ, ಪೇಪರ್ ಆರ್ಟ್, ಪೆನ್ಸೀಲ್ ಆರ್ಟ್, ಸಾಹಿತ್ಯ ಕಲಾಕೃತಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. . ಈ ಎಲ್ಲಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಾಹಿತ್ಯ ಕಲೆ ಪ್ರತಿಭೆಯನ್ನು ಪ್ರದರ್ಶಿಸಿದರು.

ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ.ರವಿಕಿರಣ್, ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಪ್ರೊ.ಸುಷ್ಮಾ ಹೂಗಾರ್, ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಶಿವಮಲ್ಲಿಕಾರ್ಜುನ, ಕಣ್ಮಣಿ, ವಿನಾಯಕ ಚಲವಾದಿ, ಕೆ.ಆನಂದ್, ಸುಮ್ಮಯ್ಯ ಖಾನುಂ, ಅಕ್ಷಯಾ ಸಿಂಗ್, ಬಸವರಾಜ ಜಿ., ಚಂದ್ರಕಾಂತ್ ಎಚ್. ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-25-1883896753

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.