ಹೊಸಪೇಟೆ: ‘ರಸ್ತೆ ಅಪಘಾತ, ಆತ್ಮಹತ್ಯೆ ಯತ್ನ, ನೀರಿನಲ್ಲಿ ಮುಳುಗುವಿಕೆ, ಹೃದಯಾಘಾತ, ಬೆಂಕಿ ಅವಘಡ, ಹಾವು ಹಾಗೂ ನಾಯಿ ಕಡಿತದಂತಹ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಯ ಅರಿವು ಜೀವ ಉಳಿಸುತ್ತದೆ. ಈ ಬಗ್ಗೆ ತಿಳಿವಳಿಕೆ ಇರುವವರು ನಿರ್ಭಯವಾಗಿ ಚಿಕಿತ್ಸೆ ಮಾಡಿ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ’ ಎಂದು ತುರ್ತು ಚಿಕಿತ್ಸಾ ತಜ್ಞ ಡಾ.ಶಬ್ಬೀರ್ ಅಹ್ಮದ್ ಹೇಳಿದರು.

ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ವಿಜಯನಗರ ಜಿಲ್ಲಾ ಘಟಕವು ನಗರದ ಗೃಹರಕ್ಷಕ ದಳದ ಕಚೇರಿಯಲ್ಲಿ ಭಾನುವಾರ ಗೃಹರಕ್ಷಕರಿಗಾಗಿ ಆಯೋಜಿಸಿದ್ದ ಪ್ರಥಮ ಚಿಕಿತ್ಸಾ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ರಸ್ತೆ ಅಪಘಾತದಲ್ಲಿ ರಕ್ತಸ್ರಾವವಾಗುತ್ತಿದ್ದರೆ ಶುದ್ಧ ಬಟ್ಟೆಯಿಂದ ಒತ್ತಿ ಹಿಡಿಯಬೇಕು. ಕುತ್ತಿಗೆ, ಬೆನ್ನುಮೂಳೆ ಪೆಟ್ಟಾಗಿರುವ ಅನುಮಾನವಿದ್ದರೆ ರೋಗಿಯನ್ನು ಅಲ್ಲಾಡಿಸಬಾರದು. ನೀರಿನಲ್ಲಿ ಮುಳುಗಿದವರನ್ನು ಮೇಲೆತ್ತಿದ ಕೂಡಲೇ ಉಸಿರಾಟ ಪರೀಕ್ಷಿಸಿ ಸಿಪಿಆರ್ ಆರಂಭಿಸಬೇಕು. ಹಾವು ಕಡಿದರೆ ಬಿಗಿಯಾಗಿ ಕಟ್ಟಬಾರದು, ಬ್ಲೇಡ್ನಿಂದ ಕೊಯ್ಯಬಾರದು. ನಾಯಿ ಕಡಿತಕ್ಕೆ 15 ನಿಮಿಷ ಸೋಪು ನೀರಿನಲ್ಲಿ ತೊಳೆಯಬೇಕು’ ಎಂದು ಸಲಹೆ ನೀಡಿದರು.

ಗೃಹರಕ್ಷಕರಿಗೆ ‘ಹ್ಯಾಂಡ್ಸ್ ಓನ್ಲಿ ಸಿಪಿಆರ್’ ತರಬೇತಿ ನೀಡಲಾಯಿತು. ‘ಎದೆಯ ಮಧ್ಯಭಾಗ ನಿಮಿಷಕ್ಕೆ 100-120 ಬಾರಿ, 5 ಸೆಂ.ಮೀ ಆಳಕ್ಕೆ ಒತ್ತಬೇಕು. ಆಂಬುಲೆನ್ಸ್ ಬರುವವರೆಗೆ ಮುಂದುವರಿಸಬೇಕು’ ಎಂದರು.

ರೆಡ್ಕ್ರಾಸ್ ಸಭಾಧ್ಯಕ್ಷ ರವಿಶಂಕರ್ ಮಾತನಾಡಿದರು. ಈ ವೇಳೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಜಯಂತಿ ಆಚರಿಸಲಾಯಿತು.

ಪ್ರಧಾನ ಕಾರ್ಯದರ್ಶಿ ರೇಖಾ ಪ್ರಕಾಶ್, ಎಂ.ಸಿ ಸದಸ್ಯೆ ಅನ್ನಪೂರ್ಣ ಸದಾಶಿವ, ಕೆ. ರೆಹಮಾನ್, ಮಹೇಂದ್ರ ಕುಮಾರ್ ಸೋನಿ, ಜಿಲ್ಲಾ ಹೋಂ ಗಾರ್ಡ್ಸ್ ಕಮಾಂಡರ್ ಎಸ್.ಎಂ. ಗಿರೀಶ್, ಪರಶುರಾಮ್ ನಾಯಕ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-25-1368429008

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.