ಶನಿವಾರ, ಸೆಪ್ಟೆಂಬರ್ 25, 2021
29 °C

ರೈಲ್ವೆಯಲ್ಲಿ ನೇಮಕಾತಿ ಹೇಗೆ? ಇಲ್ಲಿದೆ ವಿವರ

ವಿ. ಪ್ರದೀಪ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

1. ನಾನು ಈಗ 2ನೇ ಸೆಮಿಸ್ಟರ್ ಎಂಜಿನಿಯರಿಂಗ್ (ಇಸಿ) ಮಾಡುತ್ತಿದ್ದೇನೆ. ರೈಲ್ವೇಸ್ ನೇಮಕಾತಿ ಪರೀಕ್ಷೆ ಮತ್ತು ತಯಾರಿ ಬಗ್ಗೆ ಮಾಹಿತಿ ನೀಡಿ.

ಶ್ರೇಯಸ್ ದೇಶ್‌ಪಾಂಡೆ, ಬೆಂಗಳೂರು

ರೈಲ್ವೇಸ್ ಹುದ್ದೆಗಳ ನೇಮಕಾತಿ, ಮೂರು ಹಂತದ ಪರೀಕ್ಷೆಗಳ ಮೂಲಕ ನಡೆಯುತ್ತದೆ.

1. ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಂತ-1: ಎಲ್ಲಾ ಹುದ್ದೆಗಳಿಗೆ ಅನ್ವಯ.

2. ಕಂಪ್ಯೂಟರ್ ಆಧಾರಿತ ಪರೀಕ್ಷೆ, ಹಂತ-2: ಆಯಾ ಹುದ್ದೆಗಳಿಗೆ ಅನ್ವಯವಾಗುವ ಪರೀಕ್ಷೆ.

3. ವೈದ್ಯಕೀಯ ಪರೀಕ್ಷೆ/ ದಾಖಲೆಗಳ ಪರಿಶೀಲನೆ.

ಈ ಎಲ್ಲಾ ಪರೀಕ್ಷೆಗಳನ್ನು 21 ವಲಯಗಳಲ್ಲಿರುವ ರೈಲ್ವೆ ನೇಮಕಾತಿ ಮಂಡಳಿ ನಡೆಸುತ್ತದೆ ಮತ್ತು ಅರ್ಹತೆಯ ಆಧಾರದ ಮೇಲೆ ನೇಮಕಾತಿ ಆಗುತ್ತದೆ. ಆದರೆ, ಕೆಲವೊಮ್ಮೆ ಕೆಳಹಂತದ ಹುದ್ದೆಗಳಿಗೆ ಅರ್ಹತೆಯ ಆಧಾರದ ಮೇಲೆ ನೇರ ನೇಮಕಾತಿ ಆಗುವುದೂ ಇದೆ.

ಪರೀಕ್ಷೆಯ ಮಾದರಿ, ವಿಷಯಸೂಚಿಕೆ ಮತ್ತು ಹೆಚ್ಚಿನ ವಿವರಗಳಿಗಾಗಿ ಗಮನಿಸಿ: http://rrcb.gov.in/

2. ನಾನು 2ನೇ ಪಿಯುಸಿ ಮುಗಿಸಿ ಪ್ಯಾರಾಮೆಡಿಕಲ್ ಮಾಡಿ ಯುಪಿಎಸ್‌ಸಿ ಪರೀಕ್ಷೆ ಬರೆಯಬಹುದಾ?

ಹೆಸರು, ಊರು ತಿಳಿಸಿಲ್ಲ.

ಯುಪಿಎಸ್‌ಸಿ ಪರೀಕ್ಷೆಯನ್ನು ಪ್ಯಾರಾಮೆಡಿಕಲ್ ಸೇರಿದಂತೆ ಯಾವುದೇ ಪದವಿಯ ನಂತರ ಬರೆಯಬಹುದು.

3. ನಾನು ಈಗಷ್ಟೇ ದ್ವಿತೀಯ ಪಿಯುಸಿ ಸೇರಿದ್ದೇನೆ. ನನಗೆ ವಿಎಚ್‌ಎಕ್ಸ್, ಅನಿಮೇಷನ್, ಗೇಮ್ ಡಿಸೈನಿಂಗ್‌ನಲ್ಲಿ ಮುಂದುವರಿಯಬೇಕು ಎಂದು ಆಸಕ್ತಿ ಇದೆ. ದ್ವಿತೀಯ ಪಿಯುಸಿ ನಂತರ ಯಾವ ಕೋರ್ಸ್ ಮಾಡಿದರೆ ಉತ್ತಮ?

ಪ್ರಜ್ವಲ್, ಊರು ತಿಳಿಸಿಲ್ಲ.

ಈ ಸೃಜನಾತ್ಮಕ ಕ್ಷೇತ್ರಗಳಲ್ಲಿ ಆಸಕ್ತಿಯಿದ್ದರೆ ಈ ಕ್ಷೇತ್ರದ ಸ್ಪೆಷಲೈಜೇಷನ್ ಅಂದರೆ ವಿಎಚ್‌ಎಕ್ಸ್, ಅನಿಮೇಷನ್, ಗೇಮ್ ಡಿಸೈನಿಂಗ್ ಮತ್ತು ಡೆವೆಲಪ್‌ಮೆಂಟ್ ಇರುವ ಬಿಎಸ್‌ಸಿ ಕೋರ್ಸ್ ಮಾಡಬಹುದು. ಈ ಕ್ಷೇತ್ರಗಳಲ್ಲಿ ಸಾಕಷ್ಟು ವೈವಿಧ್ಯತೆಗಳಿವೆ ಮತ್ತು ಅದರಂತೆ ಉದ್ಯೋಗದ ಅವಕಾಶಗಳಿವೆ. ಹಾಗಾಗಿ, ನಿಮಗೆ ಯಾವ ಸ್ಪೆಷಲೈಜೇಷನ್‌ನಲ್ಲಿ ಆಸಕ್ತಿಯಿದೆ ಎಂದು ತಿಳಿದು, ಅದರಂತೆ ಕೋರ್ಸ್ ಮತ್ತು ಕಾಲೇಜು ಆಯ್ಕೆ ಮಾಡಬಹುದು.

4. ನಾನು ಎನ್‌ಐಡಿ ಸ್ನಾತಕೋತ್ತರ ಸಂದರ್ಶನವನ್ನು ಮುಗಿಸಿದ್ದೇನೆ. ನಾನು ಎಸ್‌ಟಿ ವರ್ಗಕ್ಕೆ ಸೇರಿದ್ದು ಒಂದು ವೇಳೆ ಪಾಸಾದರೆ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿ. ಇದಕ್ಕೆ ಉದ್ಯೋಗದ ಅವಕಾಶ ಹೇಗಿದೆ?

ಹೆಸರು ತಿಳಿಸಿಲ್ಲ, ತುಮಕೂರು

ಅರ್ಹತೆ, ಆದಾಯದ ಆಧಾರದ ಮೇಲೆ ಎನ್‌ಐಡಿ ಮತ್ತು ಫೋರ್ಡ್ ಫೌಂಡೇಷನ್ ಸ್ಕಾಲರ್‌ಶಿಪ್ ಸೌಲಭ್ಯಗಳಿವೆ. ಹೆಚ್ಚಿನ ಮಾಹಿತಿಗಾಗಿ ಎನ್‌ಐಡಿ ಸಂಸ್ಥೆಯಲ್ಲಿ ವಿಚಾರಿಸಿ. ಹಾಗೂ, ನಿಮ್ಮ ವರ್ಗಕ್ಕೆ ಮತ್ತು ಎನ್‌ಐಡಿ ವಿದ್ಯಾರ್ಥಿಗಳಿಗೆ ಅನ್ವಯವಾಗುವ ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ, ಪುಸ್ತಕಗಳು, ಉಚಿತ ಕಂಪ್ಯೂಟರ್ ಮತ್ತು ಸ್ಕಾಲರ್‌ಶಿಪ್ ಯೋಜನೆಗಳಿವೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: http://socialjustice.nic.in/SchemeList/Send/27?mid=24541

ಎನ್‌ಐಡಿ ಸ್ನಾತಕೋತ್ತರ ಕೋರ್ಸ್ ನಂತರ ಡಿಸೈನ್ ಸಂಬಂಧಿತ ಉದ್ಯೋಗಾವಕಾಶಗಳು ಅನೇಕ ಕ್ಷೇತ್ರಗಳಲ್ಲಿ ಲಭ್ಯ. ಉದಾಹರಣೆಗೆ ಫ್ಯಾಷನ್, ಟೆಕ್ಸ್ಟ್‌ಟೈಲ್, ಲೆದರ್, ಅಪರೆಲ್, ಪ್ರಾಡಕ್ಟ್‌, ಸೆರಾಮಿಕ್, ಫರ್ನಿಚರ್ ಇತ್ಯಾದಿ. ಎನ್‌ಐಡಿ ಸಂಸ್ಥೆಯಲ್ಲಿ ಪ್ಲೇಸ್‌ಮೆಂಟ್ ಸೆಲ್ ಸಹಾ ಕಾರ್ಯ ನಿರ್ವಹಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು