ಹುಬ್ಬಳ್ಳಿ: ಇಲ್ಲಿನ ಬೈರಿದೇವರಕೊಪ್ಪದ ವೀರಸಂಗೊಳ್ಳಿ ರಾಯಣ್ಣ ನಗರದಲ್ಲಿ ಭಾನುವಾರ ಬೆಳಿಗ್ಗೆ 11ಕ್ಕೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಥಣಿಯ ಬಿ.ಎಲ್.ಪಾಟೀಲ್ ಸರ್ಕಾರಿ ಶಾಲೆಗೆ ಭೂಮಿ ದಾನ ಮಾಡಿ ಅದೇ ಶಾಲೆಯಲ್ಲಿ ಬಿಸಿಯೂಟ ಕಾರ್ಯಕರ್ತೆ ಆಗಿರುವ ಕೊಪ್ಪಳದ ಹುಚ್ಚಮ್ಮ ಚೌದರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಜನ ಸಾಧಕರನ್ನು ಗೌರವಿಸಲಾಗುತ್ತಿದೆ.

ನಗರದ ‘ಬೆಳಕು ವೇದಿಕೆ’ ಎರಡನೇ ಬಾರಿ ‘ಋಣ ಸಂದಾಯ’ ಎಂಬ ಈ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಶಿರಹಟ್ಟಿ ಸಂಸ್ಥಾನ ಮಠದ ಫಕೀರ ಸಿದ್ಧರಾಮ ಸ್ವಾಮೀಜಿಯ ತುಲಾಭಾರ ಕಾರ್ಯಕ್ರಮ ನಡೆಯಲಿದೆ.

ಬಿ.ಎಲ್.ಪಾಟೀಲ್ (ದೇವದಾಸಿ ಮಕ್ಕಳ ಪುನರ್ವಸತಿ), ಕುಣಕೇರಿಯ ಹುಚ್ಚಮ್ಮ ಚೌದರಿ (ಸರ್ಕಾರಿ ಶಾಲೆಗೆ ಭೂದಾನ), ನವನಗರದ ಸಂಜೈ ವಾಸು ಕುನ್ನಾಥ್ (ಎಚ್ಐವಿ ಪೀಡಿತ ಮಕ್ಕಳ ಪೋಷಕ), ಭಟ್ರಳ್ಳಿ ಗೂಳೆಪ್ಪ (ಅರಣ್ಯ ಸಂರಕ್ಷಣೆ), ತನುಲಾ ತರುಣ (ಅನಾಥ ಮಕ್ಕಳ ಸಂರಕ್ಷಕಿ), ಘನಶಾಮ ಭಾಂಡಗೆ (ವಿಕಲಚೇತನರ ಹೋರಾಟಗಾರ), ತುಳಜಾರಾಮ ಚವ್ಹಾಣ (ಊರಿನ ಸೇವೆ ಮಾಡಿದ ಸಾಧಕ), ಮಾಳಮ್ಮ (ಮಹಿಳಾ ಸಬಲೀಕಣ), ನಿಂಗಪ್ಪ ಕುಡವಕ್ಕಲಿಗರ (ಗಾಯಾಳು ಆಪದ್ಭಾಂದವ), ಬಸವರಾಜ ಉಮರಾಣಿ, (ನಡೆದಾಡುವ ಕಂಪ್ಯೂಟರ್) ಅವರನ್ನು ಸನ್ಮಾನಿಸಲಾಗುತ್ತದೆ.

ಶಿರಹಟ್ಟಿ ಸಂಸ್ಥಾನ ಮಠದ ಫಕ್ಕೀರ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಬೆಳಕು ವೇದಿಕೆ ಸಂಚಾಲಕ ರುದ್ರಪ್ಪ ವಿರಪಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-24-120314459

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.