ಹುಬ್ಬಳ್ಳಿ: ‘ಕಾದಂಬರಿ ಸಾರ್ವಭೌಮರೆಂದೇ ಖ್ಯಾತರಾದ ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅನಕೃ) ಅವರು ಕನ್ನಡದ ಧೀಶಕ್ತಿಯಾಗಿದ್ದರು. ಬಿಡುವಿಲ್ಲದ ಸಾಹಿತ್ಯ ಕೃಷಿಯ ನಡುವೆಯೂ ನಾಡು, ನುಡಿಯ ಏಳಿಗೆಗಾಗಿ ಹೋರಾಟ ನಡೆಸಿದ ಅವರ ಬದುಕು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ’ ಎಂದು ಭರಮಗೌಡ್ರು ಪಾಟೀಲ ಹೇಳಿದರು.

ಅನಕೃ ಅವರ 118ನೇ ಜನ್ಮದಿನದ ಪ್ರಯುಕ್ತ ನಗರ ಗೋಕುಲ ರಸ್ತೆಯ ವೆಂಕಟೇಶ್ವರ ನಗರದಲ್ಲಿ ವೀರಪುಲಿಕೇಶಿ ಕನ್ನಡ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿವೃತ್ತ ಮುಖ್ಯ ಶಿಕ್ಷಕ ಎಂ.ಜಿ. ಗೋಸಿ ಮಾತನಾಡಿ, ‘ಅನೇಕ ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಕೀರ್ತಿ ಅನಕೃ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ಸುಭಾಷ್ ರಾಯರೆಡ್ಡಿ ಮಾತನಾಡಿ, ‘ಪ್ರಸಿದ್ಧ ಸಾಹಿತಿಗಳಾಗಿದ್ದರೂ ಅನಕೃ ಅವರು ಕನ್ನಡಕ್ಕಾಗಿ ರಸ್ತೆಗಿಳಿದು ಹೋರಾಟ ಮಾಡುತ್ತಿದ್ದರು. ಕನ್ನಡವೆಂದರೆ ಅನಕೃ, ಅನಕೃವೆಂದರೆ ಕನ್ನಡ ಎನ್ನುವಷ್ಟರ ಮಟ್ಟಿಗೆ ಅವರು ಭಾಷಾಭಿಮಾನಿ ಆಗಿದ್ದರು’ ಎಂದರು.

‘ಬೆಂಗಳೂರಿನಲ್ಲಿ ಶುಕ್ರವಾರದಂದು ಅನಕೃ ಅವರ ಕಾರ್ಯಕ್ರಮ, ಭಾಷಣ ಇಲ್ಲದಿರುವುದು ಖಚಿತ ಪಡಿಸಿಕೊಂಡು, ಸಿನಿಮಾಗಳನ್ನು ಬಿಡುಗಡೆ ಮಾಡಲಾಗುತ್ತಿತ್ತು. ಕಾರಣ ಅನಕೃ ಅವರ ಕಾರ್ಯಕ್ರಮ ದಿನ ಜನರು ಭಾಷಣ ಕೇಳಲು ಹೋಗುತ್ತಿದ್ದರಿಂದ ಚಿತ್ರಮಂದಿರಗಳು ಖಾಲಿ ಇರುತ್ತಿದ್ದವು. ಅಂತಹ ಅಪ್ರತಿಮ ಮಾತುಗಾರ, ಸಾಹಿತಿ ಕನ್ನಡದವರು ಎಂಬುದು ಎಲ್ಲರಿಗೂ ಹೆಮ್ಮೆ. ಅವರನ್ನು ಸ್ಮರಿಸುವುದು ಕನ್ನಡಿಗರ ಆದ್ಯ ಕರ್ತವ್ಯ’ ಎಂದು ತಿಳಿಸಿದರು.

ಬಳಗದ ಅಧ್ಯಕ್ಷ ವೆಂಕಟೇಶ ಮರೇಗುದ್ದಿ, ಪದ್ಮಾವತಿ ಮಹಿಳಾ ಮಂಡಳದ ಅಧ್ಯಕ್ಷೆ ವೀಣಾ ದೇಸಾಯಿ ಮಾತನಾಡಿದರು.

ಸಾಹಿತಿ ಗೀತಾ ಪಾಟೀಲ ನಿರೂಪಣೆ, ಭಾಗ್ಯ ಮೈಸೂರಿ ವಂದನಾರ್ಪಣೆ ಮಾಡಿದರು. ಜಿ.ಎಸ್. ಪಿಡ್ಡನಗೌಡ್ರು, ಅನ್ನಪೂರ್ಣ ನಾಡಗೌಡ್ರು, ಮೈತ್ರಾ ನೀಲಪ್ಪಗೌಡ್ರು, ಅನಕೃ ಅಭಿಮಾನಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-24-1990102153

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.