ಹುಬ್ಬಳ್ಳಿ: ರಾಜ್ಯದ ಯಾವುದೇ ಜಾತಿ– ಜನಾಂಗದ ಅನಾಥ ಮತ್ತು ಕಡುಬಡವ ಬಾಲಕರ ವಿದ್ಯಾರ್ಜನೆಗಾಗಿ ಬೆಂಗಳೂರಿನ ಆರ್ಯ ಸೇವಾಶ್ರಮ ಟ್ರಸ್ಟ್ ನಡೆಸುವ ವಿದ್ಯಾರ್ಥಿನಿಲಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ಬಟ್ಟೆ ಸೇರಿ ವಿವಿಧ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ವಿದ್ಯಾರ್ಜನೆಗೆ ಪೂರಕವಾಗಿ ವಿವಿಧ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬಾಲಕರನ್ನು ಸೇರಿಸಲಾಗುತ್ತದೆ. 7 ರಿಂದ 15 ವರ್ಷದೊಳಗಿನ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅನಾಥ ಮತ್ತು ಕಡುಬಡುವ ವಿದ್ಯಾರ್ಥಿಗಳ ಪಾಲಕರು, ಪೋಷಕರು ಮೇ 20ರ ಒಳಗೆ ಅರ್ಜಿ ಸಲ್ಲಿಸಬೇಕು.

ವಿದ್ಯಾರ್ಥಿ ನಿಲಯವು ಬೆಂಗಳೂರಿನ ರಾಜಾಜಿನಗರದ 1ನೆಯ ‘ಎನ್’ ಬ್ಲಾಕ್ದಲ್ಲಿದೆ. ಬಾಲಕರ ಆಯ್ಕೆ ಪ್ರಕ್ರಿಯೆಯನ್ನು ಬಾಲ ನ್ಯಾಯ ಕಾಯ್ದೆ-2016ರ ನಿಯಮದ ಪ್ರಕಾರ ಮಕ್ಕಳ ಕಲ್ಯಾಣ ಸಮಿತಿ ಮೂಲಕ ನಡೆಯಲಿದೆ. ಮಾಹಿತಿಗೆ ಮೊಬೈಲ್ ಸಂಖ್ಯೆ 74116 96057, 98445 16664 ಸಂಪರ್ಕಿಸಬಹುದು ಎಂದು ಆರ್ಯ ಸೇವಾಶ್ರಮ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಬಾಬು ಮತ್ತು ವ್ಯವಸ್ಥಾಪಕ ಉದಯಕುಮಾರ ಕೊಳ್ಳಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-24-969702385

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.