ಹುಬ್ಬಳ್ಳಿ: ನಗರದ ಭಾವಸಾರ ವ್ಹಿಜನ್ ಇಂಡಿಯಾ ಸಂಸ್ಥೆ ವತಿಯಿಂದ ಹಳೇ ಹುಬ್ಬಳ್ಳಿಯ ಬೆಳಮಕರ ಗಲ್ಲಿಯಲ್ಲಿನ ವಿಠಲ ಹರಿ ಮಂದಿರದಲ್ಲಿ ಈಚೆಗೆ ನಡೆದ ಬಾಲಸಂಸ್ಕಾರ ಶಿಬಿರದಲ್ಲಿ 75 ಮಕ್ಕಳು ಭಾಗವಹಿಸಿ, ಶಿಬಿರದ ಪ್ರಯೋಜನ ಪಡೆದರು.

ಶಿಬಿರದಲ್ಲಿ ವೇದ ಗಣಿತದ ಸೂತ್ರ, ಭಗವದ್ಗೀತೆಯ ಶ್ಲೋಕ ಪಠಣ, ಚಿತ್ರಕಲೆ, ಕರಕುಶಲ ತರಬೇತಿ, ವ್ಯಕ್ತಿತ್ವ ವಿಕಸನ, ನೀತಿ ಕಥೆ, ಸಂಸ್ಕಾರ, ಯೋಗದ ಮಹತ್ವ ಈ ಎಲ್ಲಾ ವಿಷಯಗಳ ಕುರಿತು ವಿಷಯ ತಜ್ಞರು ಮಕ್ಕಳಿಗೆ ತಿಳಿಸಿಕೊಟ್ಟರು.

ಇದೇ ವೇಳೆ ಮಕ್ಕಳಿಗೆ ಆರೋಗ್ಯ ರಕ್ಷಣೆ ಹಾಗೂ ಜಂಕ್ ಫುಡ್ಗಳಿಂದ ದೂರವಿದ್ದು, ಪೌಷ್ಟಿಕಾಂಶ ಆಹಾರದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು.

ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ ಪ್ರಶಂಸಾ ಪತ್ರ ಹಾಗೂ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಸಮಾರೋಪ ಕಾರ್ಯಕ್ರಮದಲ್ಲಿ ಭಾಗಹಿಸಿದ್ದ ಭಾವಸಾರ ವ್ಹಿಜನ್ ಇಂಡಿಯಾ ಸಂಸ್ಥೆಯ ರಾಷ್ಟ್ರೀಯ ಖಜಾಂಚಿ ಪ್ರಕಾಶ್ ತಿರುಮಲ್ಲೆ ಅವರು, ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ಕುರಿತು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ದಯಾನಂದ ಅಂಬರಕರ, ಕಾರ್ಯದರ್ಶಿ ಅನಂತ ಸರ್ವದೆ, ಮಕ್ಕಳ ಕಲ್ಯಾಣ ನಿರ್ದೇಶಕಿ ಅನಿತಾ ಮುಸಳೆ, ಮಹಿಳಾ ಕಲ್ಯಾಣ ನಿರ್ದೇಶಕಿ ಲಕ್ಷ್ಮಿತಾಯಿ ವಿ.ತೇಲ್ಕರ, ವಿಜಯ ಕುಮಾರ್ ಲಾಂಡೆ, ಸಾಯಿನಾಥ ಅಂಬೇಕರ್ ಹಾಗೂ ಪ್ರಮುಖರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-24-476489064

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.