ಹುಬ್ಬಳ್ಳಿ: ‘ನ್ಯಾಯಾಧೀಶರು, ವಕೀಲರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ನಿರಂತರ ಕಲಿಕೆ ಅತಿಮುಖ್ಯ’ ಎಂದು ಕೌಟುಂಬಿಕ ನ್ಯಾಯಾಲಯದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶ ರವೀಂದ್ರ ಅರಿ ಹೇಳಿದರು.

ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ‘ಆಧುನಿಕ ಕಾನೂನು ಕ್ಷೇತ್ರದಲ್ಲಿ ಮಧ್ಯಸ್ಥಿಕೆ; ಪರ್ಯಾಯದಿಂದ ಪ್ರಾಥ ಮಿಕ ನಿರ್ಣಯ’ ಕುರಿತ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಮಧ್ಯಸ್ಥಿಕೆಯು ಮಹಾಭಾರತ ಕಾಲದಲ್ಲಿಯೂ ಇತ್ತು. ಶ್ರೀಕೃಷ್ಣ ಸಂಧಾನದಿಂದ ಆರಂಭವಾಗಿ ರಾಜರ ಕಾಲದಲ್ಲೂ ಮುಂದುವರಿಯಿತು. ನಂತರ, ಪಂಚಾಯಿತಿ ಕಟ್ಟೆಗಳು ಸಂಧಾನ ಪ್ರಕ್ರಿಯೆಯ ತಾಣಗಳಾದವು. ಆಧುನಿಕ ಕಾಲದಲ್ಲಿ ನ್ಯಾಯಾಲಯದಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಮಧ್ಯಸ್ಥಿಕೆಗಾರ ಕಕ್ಷಿಗಾರರ ಮನಃಸ್ಥಿತಿ ಅರಿತುಕೊಳ್ಳಬೇಕು. ಕಾನೂನನ್ನು ಗೌರವಿಸಬೇಕಾದ್ದು ಎಲ್ಲರ ಕರ್ತವ್ಯ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ರೂಪಾ ಇಂಗಳಹಳ್ಳಿ ಮಾತನಾಡಿ, ‘ಸಂಧಾನ ಪ್ರಕ್ರಿಯೆಯಲ್ಲಿ ಪರಿಣಿತ ಮಧ್ಯಸ್ಥಿಕೆಗಾರರ ಕೊರತೆ ಇದೆ’ ಎಂದರು.

ನಂತರ, ಸಂವಾದ ಮತ್ತು ಪ್ರಶ್ನೋತ್ತರ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಸಂಯೋಜಕಿ ಪೂರ್ಣಿಮಾ ಕುರಡಿಕೇರಿ, ಸುರೇಶ ಲಿಂಬಿಕಾಯಿ, ಬಾಬುಲಾಲ್ ದರಗದ, ದೀಪಾ ಪಾಟೀಲ, ಸತೀಶ್ ಸಿ.ವಿ., ಸುರೇಶ ಲಮಾಣಿ, ಪರಸಪ್ಪ ಮಾಂಗ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-24-1159851578

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.