ಹುಬ್ಬಳ್ಳಿ: ‘ಧಾರವಾಡದ ಎಸ್ಡಿಎಂ ಸಿಇಟಿ ಹಾಗೂ ಸ್ಟ್ರಕ್ಚರಲ್ ಎಂಜಿನಿಯರ್ಸ್ ಅಸೋಸಿಯೇಷನ್ ಇಂಡಿಯಾ (ಎಸ್ಇಎ) ವತಿಯಿಂದ ಮೇ 22ರಂದು ಬೆಳಿಗ್ಗೆ 9 ಗಂಟೆಗೆ ‘ಎಸ್ಇಎ ಕಾನ್ ಟೆಕ್ –1’ ತಾಂತ್ರಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದು ಎಸ್ಇಎ ಅಧ್ಯಕ್ಷ ಸತೀಶ ಅಣ್ಣಿಗೇರಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್ಡಿಎಂ ಸಿಇಟಿ ಅಲಮ್ನಿ ಬ್ಲಾಕ್ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದೆ. ಸ್ಟ್ರಕ್ಚರಲ್ ಎಂಜಿನಿಯರಿಂಗ್ ಕ್ಷೇತ್ರದ ಹೊಸ ತಂತ್ರಜ್ಞಾನ, ಎತ್ತರದ ಕಟ್ಟಡಗಳ ಸಂರಚನಾ ವ್ಯವಸ್ಥೆ ಕುರಿತು ತಜ್ಞರು ಉಪನ್ಯಾಸ ನೀಡಲಿದ್ದಾರೆ’ ಎಂದರು.

ವೆಂಕಟೇಶಮೂರ್ತಿ ಕೆ.ಎಸ್., ಸಂಜಯ ಅಮೀನಭಾವಿ, ಸುದರ್ಶನ ಅಯ್ಯಂಗಾರ್, ಡಿ.ಕೆ. ಕುಲಕರ್ಣಿ ಹಾಗೂ ಮಮತಾ ಮೊಗಲಿ ಅವರು ವಿವಿಧ ವಿಷಯಗಳ ಕುರಿತು ಮಾಹಿತಿ ಒದಗಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅತಿಥಿಯಾಗಿ ಎಸ್ಡಿಎಂ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಜೀವಂಧರ್ ಕುಮಾರ್, ಎಸ್ಡಿಎಂ ಸಿಇಟಿ ಪ್ರಾಂಶುಪಾಲ ರಮೇಶ ಚಕ್ರಸಾಲಿ, ನಾಗರಿಕ ಎಂಜನಿಯರಿಂಗ್ ವಿಭಾಗದ ಮುಖ್ಯಸ್ಥ ರೆಜಿನಾಲ್ಡ್ ಫರ್ನಾಂಡೀಸ್, ವಿ.ಬಿ. ಪಾಟೀಲ, ಆಸಿಫ್ ಇಕ್ಬಾಲ್ ದಾನವಾಡ ಭಾಗವಹಿಸುವರು ಎಂದರು.

ಸಮ್ಮೇಳನದ ಆಯೋಜನಾ ಸಮಿತಿ ಅಧ್ಯಕ್ಷ ವಿ.ಬಿ. ಪಾಟೀಲ, ಸಿಇಎ ಇಂಡಿಯಾ ಕಾರ್ಯದರ್ಶಿ ಆಸಿಫ್ ಇಕ್ಬಾಲ್ ದಾನವಾಡ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-24-2021841629

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.