ಹುಬ್ಬಳ್ಳಿ: ‘ಪದವಿ, ಉದ್ಯೋಗ ಪಡೆಯಲು ಮಾತ್ರವಲ್ಲದೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಲು ಶಿಕ್ಷಣ ಅವಶ್ಯ’ ಎಂದು ಮಂಗಳೂರಿನ ಶಾಂತಿ ಪ್ರಕಾಶನ ಅಧ್ಯಕ್ಷ ಮಹಮ್ಮದ ಕುಂಞಿ ಹೇಳಿದರು.

ಇಲ್ಲಿನ ಸನಾ ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಏಕತೆ, ಸಹೋದರತ್ವ, ಪರಸ್ಪರ ಗೌರವ ಮತ್ತು ಮಾನವೀಯ ಮೌಲ್ಯಗಳು ಮುಖ್ಯ. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ದ್ವೇಷ ಹರಡುವುದನ್ನು ನಿಲ್ಲಿಸಿ, ಪ್ರೀತಿ, ಸೌಹಾರ್ದ ಮತ್ತು ಸಹಬಾಳ್ವೆ ಬೆಳೆಸಬೇಕು’ ಎಂದರು.

ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ನ ರಿಜಿಸ್ಟ್ರಾರ್ ಶ್ರೀಕಾಂತ ಫುಲಾರೆ ಮಾತನಾಡಿ, ‘ಶಿಕ್ಷಣವು ಕುಟುಂಬ, ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು. ಯುವಜನತೆ ಮೌಲ್ಯ, ಮಾನವೀಯತೆ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

ಮಡಿವಾಳಪ್ಪ ನಾಗರಹಳ್ಳಿ ಅವರು, ‘ಸಂಕಷ್ಟ ಮತ್ತು ಟೀಕೆಗಳು ಜೀವನದ ಭಾಗವಾಗಿದ್ದು, ಪರಿಶ್ರಮ, ತಾಳ್ಮೆ ಮತ್ತು ಧೈರ್ಯದಿಂದ ಮುಂದುವರಿದರೆ ಯಶಸ್ಸು ಸಾಧ್ಯ’ ಎಂದು ಹೇಳಿದರು.

ಸನಾ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹಮ್ಮದ ಹುಸೇನ ಮಳಗಿ, ಮ್ಯಾನೆಜಿಂಗ್ ಟ್ರಸ್ಟಿ ಅಶ್ರಫ್ ಅಲಿ ಬಶೀರ ಅಹಮ್ಮದ್, ಅಯೂಬ್ ಖಾನ್ ಸವಣೂರ, ತಾರಿಖ್ ಮುಜಾಹೀದ್, ಸರ್ಫರಾಜ್ ಅತ್ತಾರ, ಅಬ್ದುಲ ರಹಮಾನ ಮುಲ್ಲಾ, ಮಹೇಶ ಗದಗ, ಅಬ್ದುಲ್ ರಜಾಕ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-24-1011838243

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.