ಹುಬ್ಬಳ್ಳಿ: ‘ಶಿಕ್ಷಣ ಮನಸ್ಸು ಅರಳಿಸುತ್ತದೆ. ಜ್ಞಾನಿಯಾಗಿಸುತ್ತದೆ. ಹೀಗಾಗಿ ಮಕ್ಕಳು ತಪ್ಪದೆ ಶಾಲೆಗೆ ಹೋಗಬೇಕು’ ಎಂದು ಎಸ್ಡಿಎಂಸಿ ಉಪಾಧ್ಯಕ್ಷ ಕಲ್ಲನಗೌಡ್ರು ಕೌಜಗೇರಿ ಹೇಳಿದರು.

ತಾಲ್ಲೂಕಿನ ಕುಸುಗಲ್ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಪೋಷಕರ ಮಹಾಸಭೆ, ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.

‘ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಸೇರಿದಂತೆ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಇವುಗಳ ಸದುಪಯೋಗ ಪಡೆದು ಉತ್ತಮವಾಗಿ ಅಭ್ಯಾಸ ಮಾಡಬೇಕು’ ಎಂದರು.

ಮುಖ್ಯ ಅತಿಥಿಯಾಗಿದ್ದ ಕಾರ್ತಿಕ್ ಮಾತನಾಡಿ, ‘ವಿದ್ಯೆಯಿಂದ ಜೀವನಶೈಲಿ ಬದಲಾಗುತ್ತದೆ. ಭವಿಷ್ಯದ ಸವಾಲುಗಳನ್ನು ಎದುರಿಸಲು ಶಕ್ತಿ ಬರುತ್ತದೆ’ ಎಂದು ಹೇಳಿದರು.

ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಐ.ಎಂ.ಇಳಕಲ್ಲ, ‘ಶಾಲೆಯಲ್ಲಿ ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾ ವಿಭಾಗ ಮತ್ತು ಚಿತ್ರಕಲಾ ವಿಭಾಗಗಳಿದ್ದು, ಡಿಜಿಟಲ್ ಬೋಧನಾ ಸೌಲಭ್ಯ ಇದೆ’ ಎಂದರು.

ಶಿಕ್ಷಕ ಸಂಜೀವಕುಮಾರ ಭೂಶೆಟ್ಟಿ, ‘ಶಾಲೆಗೆ 2025ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಪಾಲಕರು-ಪೋಷಕರು ಸಹಕರಿಸಬೇಕು’ ಎಂದು ಹೇಳಿದರು.

ಶಿಕ್ಷಕರಾದ ಪ್ರೀತಾ ಫರ್ನಾಂಡಿಸ್, ಅಮೀರಾಬಾನು ದಲಾಲ, ಸುರೇಶ ನಾಯ್ಕ, ಲೋಕೇಶ ಡಿ., ಸುಭಾಷ ಜಕಾತಿ, ಮಂಜುಕುಮಾರಿ ರಜಪೂತ, ಪ್ರಭಾಕರ ಪತ್ತಾರ, ವೆಂಕಟೇಶಮೂರ್ತಿ ಪುರಾಣಿಕ, ಪ್ರಶಾಂತ ಜೋಶಿ, ರೇಣುಕಾ ಶಿಗ್ಲಿ, ಪ್ರೇಮಾ ಹಲಗಿ, ಭಾನು ರಹೀಂಕಾನವರ, ನೇತ್ರಾವತಿ ದೊಡ್ಡಮನಿ, ಸುಮಾ ನೂಲ್ವಿ, ಲಕ್ಷ್ಮಿ ಮುದೇನೂರ, ಶೋಭಾ ಕೌಜಗೇರಿ, ರುಕ್ಸಾನಾಬೇಗಂ ಮುಲ್ಲ ಇದ್ದರು. ಭಾನುಮತಿ ಆಡಗಲ್ಲ ನಿರೂಪಿಸಿ, ಎನ್.ಎಸ್.ಯಲಿಗಾರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-24-304084208

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.