ಹುಬ್ಬಳ್ಳಿ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಜೂನ್ 1ರಿಂದ ಆರಂಭವಾಗಲಿದ್ದು, ಮಕ್ಕಳಿಗೆ ಅಗತ್ಯವಾದ ಪಠ್ಯಪುಸ್ತಕಗಳು ಸರ್ಕಾರಿ ಗೋದಾಮಿಗೆ ರವಾನೆಯಾಗಿದೆ. ಹುಬ್ಬಳ್ಳಿ ಶಹರಕ್ಕೆ ಅಗತ್ಯವಿರುವ ಪುಸ್ತಕಗಳನ್ನು ನಗರದ ಹೊಸೂರಿನ ಸರ್ಕಾರಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದು, ಶಾಲೆಗಳಿಗೆ ಹಸ್ತಾಂತರಿಸುವ ಕಾರ್ಯ ನಡೆಯುತ್ತಿದೆ.

1 ರಿಂದ 10ನೇ ತರಗತಿಯ ಪುಸ್ತಕಗಳನ್ನು ಶಾಲೆಗಳ ಬೇಡಿಕೆಗೆ ಅನುಗುಣವಾಗಿ, ತರಗತಿವಾರು ಜೋಡಿಸಿಡಲಾಗಿದೆ. ಕನ್ನಡ, ಇಂಗ್ಲಿಷ್ ಮತ್ತು ಉರ್ದು ಮಾಧ್ಯಮದ ಪುಸ್ತಕಗಳನ್ನು ಸಹ ಪ್ರತ್ಯೇಕವಾಗಿ ಇಡಲಾಗಿದೆ. ಪುಸ್ತಕ ಮುದ್ರಣದ ಗುತ್ತಿಗೆ ಪಡೆದ ಸಂಸ್ಥೆಗಳು ಬೆಳಗಾವಿ, ಗದಗ, ಬೆಂಗಳೂರು ಮತ್ತು ಮೈಸೂರಿನಿಂದ ಮುದ್ರಿಸಿ ಗೋದಾಮಿಗೆ ಪೂರೈಸಿವೆ.

ಹುಬ್ಬಳ್ಳಿ ಶಹರ ತಾಲ್ಲೂಕಿನಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ 325 ಶಾಲೆಗಳು ಇದ್ದು, ಅಂದಾಜು 12 ಲಕ್ಷ ಪುಸ್ತಕಗಳಿಗೆ ಬೇಡಿಕೆ ಸಲ್ಲಿಕೆಯಾಗಿತ್ತು. ಸದ್ಯ 10 ಲಕ್ಷ ಪುಸ್ತಕಗಳು ಬಂದಿವೆ. ಸರ್ಕಾರಿ ಶಾಲೆಗಳಿಗೆ ಕ್ಲಸ್ಟರ್ ಮಟ್ಟದಲ್ಲಿ ವಾಹನದ ಮೂಲಕ ಪುಸ್ತಕಗಳನ್ನು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹಣ ಪಾವತಿಸಿದ ರಸೀದಿ ಆಧಾರದ ಮೇಲೆ ಖಾಸಗಿ ಶಾಲೆಗಳಿಗೆ ಗೋದಾಮಿನಲ್ಲಿಯೇ ಪುಸ್ತಕಗಳನ್ನು ಪೂರೈಸಲಾಗುತ್ತಿದೆ.

1 ರಿಂದ 10ನೇ ತರಗತಿವರೆಗೆ ಒಟ್ಟು 99 ವಿಷಯಗಳು ಇದ್ದು, ಈಗಾಗಲೇ 78 ವಿಷಯಗಳ ಪಠ್ಯಪುಸ್ತಕಗಳು ಸರಬರಾಜು ಆಗಿವೆ. ಉಳಿದ ಪುಸ್ತಕಗಳು ಎರಡು ದಿನಗಳಲ್ಲಿ ಬರಲಿವೆ. ಪ್ರಸ್ತುತ ವರ್ಷ ಖಾಸಗಿ ಶಾಲೆಗಳು ₹1.43 ಕೋಟಿ ಮೊತ್ತದ ಪುಸ್ತಕಗಳಿಗೆ ಬೇಡಿಕೆ ಇಟ್ಟಿವೆ’ ಎಂದು ಗೋದಾಮಿನ ಉಸ್ತುವಾರಿ ಅಶೋಕ ಈರಗಾರ ತಿಳಿಸಿದರು.

‘ಶೇ 80ರಷ್ಟು ಪಠ್ಯ ಪುಸ್ತಕಗಳು ಗೋದಾಮಿಗೆ ಪೂರೈಕೆಯಾಗಿದ್ದು, 60 ಸರ್ಕಾರಿ, 40 ಅನುದಾನಿತ ಹಾಗೂ 40 ಅನುದಾನ ರಹಿತ ಶಾಲೆಗಳಿಗೆ ಹಂಚಿಕೆಯಾಗಿವೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-24-89298157

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.