ಹುಬ್ಬಳ್ಳಿ: ‘ಅಖಿಲ ಭಾರತ ಬ್ರಾಹ್ಮಣ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ ಇಲ್ಲಿನ ಭವಾನಿ ನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುಜಯೀಂದ್ರ ಭವನದಲ್ಲಿ ಮೇ 28ರಂದು ಬೆಳಿಗ್ಗೆ 10ಕ್ಕೆ ಜೀವನಂ ಸ್ವಾವಲಂಬನಮ್ ಕಾರ್ಯಾಗಾರ ಏರ್ಪಡಿಸಲಾಗಿದೆ’ ಎಂದು ಕ್ಷೇಮಾಭಿವೃದ್ಧಿ ನಿಧಿಯ ಕಾರ್ಯದರ್ಶಿ ನರಸಿಂಹರಾವ್ ಸೋಮಲಾಪುರ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉದ್ಯಮಿ ಎಚ್.ಎನ್. ನಂದಕುಮಾರ ಅವರು ಕಾರ್ಯಾಗಾರಕ್ಕೆ ಚಾಲನೆ ನೀಡುವರು. ಮಾಜಿ ಮೇಯರ್ ಹನುಮಂತ ಡಂಬಳ ಅವರು ಶಿಕ್ಷಣ ಹಾಗೂ ಸ್ವ ಉದ್ಯೋಗ ಮಾರ್ಗದರ್ಶನ ಕೇಂದ್ರ ಉದ್ಘಾಟಿಸುವರು. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಅಧ್ಯಕ್ಷ ಗೋವಿಂದ ಜೋಶಿ, ಉದ್ಯಮಿಗಳಾದ ಬಿ.ಎಂ. ಪುರೋಹಿತ, ರವಿ ದೇಶಪಾಂಡೆ, ಶ್ರೀಕಾಂತ ಕರಿ, ಡಾ. ಗೌತಮ ಹಳದಿಪುರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕ್ಷೇಮಾಭಿವೃದ್ಧಿ ನಿಧಿಯ ಹು–ಧಾ ಘಟಕದ ಅಧ್ಯಕ್ಷ ವಾದಿರಾಜ ಪಾಟೀಲ ಅಧ್ಯಕ್ಷತೆ ವಹಿಸುವರು’ ಎಂದರು.

‘ಬೆಳಿಗ್ಗೆ 11.45ಕ್ಕೆ ಡಾ. ವೆಂಕಪ್ಪಯ್ಯ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಶಿಕ್ಷಣ ಗೋಷ್ಠಿ, ಮಧ್ಯಾಹ್ನ 1ಕ್ಕೆ ಸ್ವ ಉದ್ಯೋಗ ಗೋಷ್ಠಿ, 3ಕ್ಕೆ ಮಹಿಳಾ ಗೋಷ್ಠಿ, ಸಂಜೆ 4.45ಕ್ಕೆ ಸನಾತನ ಸಂಸ್ಕಾರ ಗೋಷ್ಠಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡುವರು. ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ವಾದಿರಾಜ ಪಾಟೀಲ ಅಧ್ಯಕ್ಷತೆ ವಹಿಸುವರು. ಎ.ಸಿ. ಗೋಪಾಲ, ಗೋಪಾಲ ಕುಲಕರ್ಣಿ, ರಾಜೀವ ಪಾಟೀಲ, ಲಕ್ಷ್ಮಣ ಕುಲಕರ್ಣಿ ಅತಿಥಿಗಳಾಗಿ ಭಾಗವಹಿಸುವರು’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-24-128904209

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.