ಹುಬ್ಬಳ್ಳಿ: ನಗರದ ಕೆಎಲ್ಇ ಸಂಸ್ಥೆಯ ಬಿಬಿಎ ಕಾಲೇಜಿನಲ್ಲಿ ‘ಲೋಗೊ ಸೃಷ್ಟಿಯ ಹಿಂದಿನ ಮನೋವಿಜ್ಞಾನ ಮತ್ತು ವ್ಯವಹಾರ ಯಶಸ್ಸಿನಲ್ಲಿ ಲೋಗೊ ಪಾತ್ರ’ ಎಂಬ ವಿಷಯದ ಕುರಿತು ಈಚೆಗೆ ವಿಚಾರ ಸಂಕಿರಣ ನಡೆಯಿತು.

ಇಮ್ಯಾಜಿನಾಡ್ ಡಿಸೈನ್ ಸ್ಟುಡಿಯೊ ಸಂಸ್ಥಾಪಕ ವಿಜಯ್ ರೇಡಕರ್ ಮಾತನಾಡಿ, ‘ಲೋಗೊಗಳು ಹೆಚ್ಚು ಪ್ರಭಾವ ಬೀರುತ್ತವೆ. ಅವುಗಳ ಬಣ್ಣ, ಆಕಾರ ಹಾಗೂ ಮುದ್ರಣ ಕಲೆಯಂತಹ ಸೂಕ್ಷ್ಮ ಅಂಶಗಳು ವ್ಯಕ್ತಿಯ ಭಾವನೆ ಮತ್ತು ವರ್ತನೆಗಳ ಮೇಲೆ ಸೂಕ್ಷ್ಮವಾಗಿ ಪ್ರಭಾವ ಬೀರುತ್ತವೆ’ ಎಂದು ತಿಳಿಸಿದರು.

‘ಗ್ರಾಹಕರ ನಿರ್ಧಾರದ ಮೇಲೆಯೂ ಲೋಗೊಗಳು ಪ್ರಭಾವ ಬೀರುತ್ತವೆ. ಬ್ರ್ಯಾಂಡಿಂಗ್ನಲ್ಲಿ ಇವುಗಳ ಪಾತ್ರ ಪ್ರಮುಖವಾಗಿದೆ’ ಎಂದರು.

ಸಂಯೋಜಕ ಪ್ರೊ. ಜಸ್ಲೀನ್ ಕುರಾಟಿ ಇದ್ದರು.

ಕಾರ್ಯಾಗಾರ: ಮಾರ್ಕೆಟಿಂಗ್ನಲ್ಲಿ ಸೃಜನಶೀಲತೆಯ ಪ್ರಾಮುಖ್ಯತೆ ತಿಳಿಸುವ ನಿಟ್ಟಿನಲ್ಲಿ ಕೆೆೆಎಲ್ಇ ಬಿಬಿಎ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ‘ಸೃಜನಾತ್ಮಕ ಮಾರ್ಕೆಟಿಂಗ್’ ಎಂಬ ಕಾರ್ಯಾಗಾರ ನಡೆಯಿತು.

ಪ್ರಚಾರ ತಂತ್ರಗಳಲ್ಲಿ ಹೊಸತನ ಅಳವಡಿಸಿಕೊಳ್ಳುವುದು, ಮಾರ್ಕೆಟಿಂಗ್ನ ವಿವಿಧ ಕಾರ್ಯತಂತ್ರಗಳು, ವಿಶಿಷ್ಠ ಬ್ರ್ಯಾಂಡ್ ಗುರುತು ಅಭಿವೃದ್ಧಿ, ತಜ್ಞರ ಸಲಹೆ ಪಡೆಯುವುದರ ಕುರಿತು ತರಬೇತುದಾರ ಕಿರಣ ಬೇದ್ರೆ ಮಾಹಿತಿ ನೀಡಿದರು.

ಕಾರ್ಯಕ್ರಮ ಸಂಯೋಜಕ ಮಹೇಶ ಹುಡೇದ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-24-355437134

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.