ಹುಬ್ಬಳ್ಳಿ: ನಗರದ ಕೆಎಲ್ಇ ಐಎಂಎಸ್ಆರ್ ಎಂಬಿಎ ಮಹಾವಿದ್ಯಾಲಯ ಆಯೋಜಿಸಿದ್ದ ಮ್ಯಾಡ್ಸ್ಮೀಟ್–2026 ಸ್ಪರ್ಧೆಯಲ್ಲಿ ಕೆಎಲ್ಇ ಕಾಲೇಜ್ ಆಫ್ ಬಿಸಿನೆಸ್ ಆಡ್ಮಿನಿಸ್ಟ್ರೇಷನ್, ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

ಸ್ಟಾರ್ಟ್ಥಾನ್ ಸ್ಪರ್ಧೆಯಲ್ಲಿ ಕೆಎಲ್ಇ ಸಿಬಾಲ್ಕ್ ಕಾಲೇಜು ತಂಡ ಜಯ ಗಳಿಸಿ, ₹15 ಸಾವಿರ ಬಹುಮಾನ ತನ್ನದಾಗಿಸಿಕೊಂಡಿತು. ಇದರೊಂದಿಗೆ ದಿ ಕರ್ಟನ್ ರೈಸರ್, ನೋವಸ್, ರೇಸಿಂಗ್ ಪಾಲಡಿನ್, ಮ್ಯಾಚ್ವಿಜ್ ಸ್ಪರ್ಧೆಗಳೂ ನಡೆದವು. ಒಟ್ಟು 22 ತಂಡಗಳು ಪಾಲ್ಗೊಂಡು ಕೌಶಲ ಪ್ರದರ್ಶಿಸಿದವು.

ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಟಿ ಅನು ಪ್ರಭಾಕರ್ ಅವರು, ‘ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಅದನ್ನು ನನಸಾಗಿಸಲು ಶ್ರಮಪಡಬೇಕು. ಹಿರಿಯರು ಹಾಗೂ ಶಿಕ್ಷಕರನ್ನು ಗೌರವಿಸಬೇಕು. ಹೆಣ್ಣುಮಕ್ಕಳಿಗೆ ಶಿಕ್ಷಣವೇ ಆಯುಧ’ ಎಂದರು. ಹುಬ್ಬಳ್ಳಿ–ಧಾರವಾಡದಲ್ಲಿ ಕಳೆದ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಸ್.ಸಿ. ಮೆಟಗುಡ್ಡ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ರಾಜೇಂದ್ರಪ್ರಸಾದ ಹನಗಂಡಿ ಸ್ವಾಗತಿಸಿದರು, ಪ್ರೊ. ಅಮಿತ್ ಅಂಗಡಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-24-1761514681

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.