ಹುಬ್ಬಳ್ಳಿ: ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮೂರು ದಿನ ಆಯೋಜಿಸಿದ ‘ಪ್ಲೀಡೀಸ್–26’ ರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ಉತ್ಸವಕ್ಕೆ ಭಾನುವಾರ ಸಂಭ್ರಮದ ತೆರೆಬಿದ್ದಿತು.

ಡಾ. ಪ್ರಭಾಕರ ಕೋರೆ ಕ್ರೀಡಾಂಗಣದಲ್ಲಿ ಸ್ಟ್ಯಾಂಡ್ಅಪ್ ಕಾಮಿಡಿಯನ್ ವಿವೇಕ್ ಸಮತಾನಿ ಅವರ ಹಾಸ್ಯ ಕಾರ್ಯಕ್ರಮ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿತು.

ಕೆಎಲ್ಇ ಟೆಕ್ ಸಭಾಂಗಣದಲ್ಲಿ ಭಾಷಣಕಾರ ಸಿಂಚು ಆರ್. ರಾಜು ಅವರು ‘ಡಿಜಿಟಲ್ ಗುರುತು: ಲಿಂಕ್ಡ್ಇನ್ ಪ್ರೊಫೈಲ್ ರೂಪಿಸುವ ಕಲೆ’ ಕುರಿತು ಮಾಹಿತಿ ನೀಡಿದರು. ದೇಶಪಾಂಡೆ ಫೌಂಡೇಷನ್ ಸಭಾಂಗಣದಲ್ಲಿ ಧಾರವಾಡ ಐಐಐಟಿಯ ಅಧ್ಯಾಪಕ ಸುನಿಲ್ ಸೌಮ್ಯ ಅವರು ‘ಪ್ರಾಂಪ್ಟ್ನಿಂದ ಶಕ್ತಿಯೆಡೆಗೆ: ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಬುದ್ಧಿಮತ್ತೆ’ ವಿಷಯದ ಕುರಿತು ಮಾತನಾಡಿದರು.

ಮುಂದೆ ಬನ್ನಿ ಸಂಸ್ಥೆಯ ಸಂಸ್ಥಾಪಕ ವಸಂತ ಶೆಟ್ಟಿ ಅವರು ‘ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನಿರ್ಮಾಣ’ ವಿಚಾರದ ಬಗ್ಗೆ ಉಪನ್ಯಾಸ ನೀಡಿದರು.

ಮೋಟಾರ್ ರೋಡ್ ಷೋ: ವಿಶ್ವವಿದ್ಯಾಲಯದ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಮೋಟಾರ್ ರೋಡ್ ಷೋ ಗಮನ ಸೆಳೆಯಿತು. ಜಿಮ್ಖಾನಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಫ್ಯಾಷನ್ ಷೋ ಜರುಗಿತು.

ಸಂಸ್ಥೆಯ ಸಂಸ್ಥಾಪಕ ಬಿ.ವಿ. ಭೂಮರಡ್ಡಿ ಅವರ 141ನೇ ಜನ್ಮದಿನದ ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ವಿಶ್ವವಿದ್ಯಾಲಯದ ಕುಲಪತಿ ಪ್ರಕಾಶ ತೆವಾರಿ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಸಂಜಯ ಕೊಟಬಾಗಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-24-1687948428

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.