ಹುಬ್ಬಳ್ಳಿ: ನಗರದ ಬಿವಿಬಿ ಕಾಲೇಜಿನ ಆವರಣದಲ್ಲಿ ಸಂಸ್ಥೆಯ ಸಂಸ್ಥಾಪಕ ಬಿ.ವಿ.ಭೂಮರಡ್ಡಿ ಅವರ 141ನೇ ಜನ್ಮ ಜಯಂತಿ ಅಂಗವಾಗಿ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಿಂದ ಆಯೋಜಿಸಿರುವ ಮೂರು ದಿನಗಳ ‘ಪ್ಲೀಡೀಸ್ 26’ ರಾಷ್ಟ್ರಮಟ್ಟದ ತಂತ್ರಜ್ಞಾನ– ಸಾಂಸ್ಕೃತಿಕ ಉತ್ಸವಕ್ಕೆ ಸೇನಾ ನಿವೃತ್ತ ಅಧಿಕಾರಿ ಕರ್ನಲ್ ರಾಜೀವ್ ಭಾರ್ಗವ ಅವರು ಶುಕ್ರವಾರ ಚಾಲನೆ ನೀಡಿದರು.

ತಜ್ಞರು, ಶಿಕ್ಷಣ ತಜ್ಞರ ನೇತೃತ್ವದಲ್ಲಿ ವಿವಿಧ ಕಾರ್ಯಾಗಾರ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆದವು.

ಡಾ.ಪ್ರಭಾಕರ ಕೋರೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಕಾರ್ಯಾಗಾರದಲ್ಲಿ ‘ಬೋಟ್’ ಕಂಪನಿಯ ಸಹ ಸಂಸ್ಥಾಪಕ ಅಮನ್ ಗುಪ್ತಾ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

‘ವಿದ್ಯಾರ್ಥಿ ದಿಸೆಯಿಂದಲೇ ಕಂಪನಿ ಅಥವಾ ಸ್ಟಾರ್ಟ್ ಅಪ್ ಕಡೆಗೆ ಒಲವು ತೋರಬೇಕು. ಉದ್ಯಮ ಆರಂಭಕ್ಕೆ 18ರಿಂದ 21 ವಯಸ್ಸು ಸೂಕ್ತವಾದದ್ದು’ ಎಂದರು.

‘ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಹೊಸ ಉತ್ಪಾದನೆಯನ್ನು ಹೇಗೆ ಅತ್ಯುತ್ತಮವಾಗಿ ಜನರಿಗೆ ಕೊಡಬಹುದು ಎಂದು ಆಲೋಚನೆ ಮಾಡಿದ್ದರಿಂದ ‘ಬೋಟ್ ಕಂಪನಿ’ ಆರಂಭವಾಯಿತು‘ ಎಂದು ತಮ್ಮ ಉದ್ಯಮ ಪಯಣದ ಕುರಿತು ವಿವರಿಸಿದರು.

ನವೋದ್ಯಮ, ಮಾರುಕಟ್ಟೆ, ಬ್ರ್ಯಾಂಡಿಂಗ್, ಸ್ಟಾರ್ಟ್ಅಪ್ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕುಲಪತಿ ಪ್ರಕಾಶ್ ತೆವರಿ, ಕುಲಸಚಿವ ಬಸವರಾಜ ಅನಾಮಿ, ಕಾರ್ಯನಿರ್ವಾಹಕ ಡೀನ್ ಪ್ರೊ. ಬಿ. ಎಲ್. ದೇಸಾಯಿ, ಸಂಜಯ್ ಕೊಟಬಾಗಿ, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-24-1442128407

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.