ಹುಬ್ಬಳ್ಳಿ: ಇಲ್ಲಿನ ಜೆ.ಸಿ. ನಗರದಲ್ಲಿರುವ ಶ್ರೀ ಜಗದ್ಗುರು ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ (ಎಸ್ಜೆಎಂವಿಎಸ್) ಹಳೆಯ ವಿದ್ಯಾರ್ಥಿನಿಯರ ಪುನರ್ಮಿಲನ ಕಾರ್ಯಕ್ರಮ ‘ಮರಳಿ ಬೇರಿಗೆ’ ಶನಿವಾರ ನಡೆಯಿತು.

ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಮಾತನಾಡಿ, ‘ಬೇರುಗಳು ಎಷ್ಟು ಆಳಕ್ಕೆ ಹೋಗುತ್ತವೆಯೋ ಮರ ಅಷ್ಟು ಎತ್ತರ ಬೆಳೆಯುತ್ತದೆ. ಹಾಗೆಯೇ ವಿದ್ಯಾರ್ಥಿನಿಯರು ತಾವು ಕಲಿತ ಶಾಲಾ-ಕಾಲೇಜುಗಳೆಂಬ ಬೇರನ್ನು ಮರೆಯಬಾರದು’ ಎಂದರು.

ಮುಖ್ಯ ಅತಿಥಿಯಾಗಿದ್ದ ಹಾವೇರಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರೇಮಾ ಪಾಟೀಲ ಮಾತನಾಡಿ, ‘ನಾನು ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಳ್ಳಲು ಈ ಕಾಲೇಜಿನಲ್ಲಿ ಸಿಕ್ಕ ಪ್ರೋತ್ಸಾಹವೇ ಕಾರಣ. ಹೆಣ್ಣುಮಕ್ಕಳು ಶಿಕ್ಷಣದ ಜತೆಗೆ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ಲೇಖಕಿ ಸುನಂದಾ ಕಡಮೆ ಮಾತನಾಡಿ, ‘ಕಾಲೇಜು ಎಂಬುದು ಕೇವಲ ನಾಲ್ಕು ಗೋಡೆಗಳ ಕಟ್ಟಡವಲ್ಲ, ಅದು ನಮ್ಮ ಕನಸುಗಳಿಗೆ ರೆಕ್ಕೆ ನೀಡುವ ಆಕಾಶ. ಇಲ್ಲಿ ನಾವು ಕಲಿತ ಅಕ್ಷರಗಳು ನಮ್ಮ ಬದುಕಿನ ಸಂಕಷ್ಟದ ಸಮಯಗಳಲ್ಲಿ ದಾರಿದೀಪವಾಗಿವೆ. 'ಮರಳಿ ಬೇರಿಗೆ' ಬರುವುದು ಎಂದರೆ ನಮ್ಮ ಅಸ್ಮಿತೆಯನ್ನು ನಾವು ಮತ್ತೆ ಕಂಡುಕೊಂಡಂತೆ’ ಎಂದರು.

150ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೆನಪುಗಳನ್ನು ಮೆಲುಕು ಹಾಕಿದರು. ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಎಸ್ಜೆಎಂವಿ ಸಂಘದ ಗೌರವ ಕಾರ್ಯಾಧ್ಯಕ್ಷ ಅರವಿಂದ್ ಕುಬಸದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವ ಸದಸ್ಯರಾದ ಲಿಂಗರಾಜ ಇಂಗಳಹಳ್ಳಿ, ಮಲ್ಲಿಕಾರ್ಜುನ ಕಳಸರಾಯ, ಪ್ರಾಚಾರ್ಯೆ ಸಿಸಿಲಿಯಾ ಡಿಕ್ರೂಜ್, ಐಕ್ಯುಎಸಿ ಸಂಯೋಜಕ ಶಿವಕುಮಾರ ಬನ್ನಿಹಟ್ಟಿ ಇದ್ದರು.

ಮಹಾವಿದ್ಯಾಲಯದ ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸುನೀತಾ ರಾಣಿ ಸ್ವಾಗತಿಸಿ, ಅಶ್ವಿನಿ ಇಂದರಗಿ ಹಾಗೂ ವಿದ್ಯಾ ಡಂಬಳ ಅತಿಥಿಗಳನ್ನು ಪರಿಚಯಿಸಿದರು. ರಾಜೇಶ್ವರಿ ಗೋರ್ಕೊಂಡ ವಂದಿಸಿದರು. ಶಾರದಾ ಬಡಿಗೇರ ಕಾರ್ಯಕ್ರಮ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-24-312419941

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.