ಹುಬ್ಬಳ್ಳಿ: ‘ಶುಶ್ರೂಷಕರ ವೃತ್ತಿಜೀವನದಲ್ಲಿ ಮಾನವೀಯತೆ, ಸಮರ್ಪಣೆ ಮತ್ತು ಸೇವಾ ಮೌಲ್ಯಗಳಿರಬೇಕು’ ಎಂದು ಭಾರತೀಯ ವೈದ್ಯಕೀಯ ಪದ್ಧತಿ ಆಯೋಗದ ಆಯುರ್ವೇದ ಮಂಡಳಿ ಅಧ್ಯಕ್ಷ ಅಲ್ಲಮಪ್ರಭುಗುಡ್ಡ ಹೇಳಿದರು.

ಇಲ್ಲಿನ ಎಂ.ಆರ್. ಸಾಖರೆ ಇಂಗ್ಲಿಷ್ ಮಾಧ್ಯಮ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕೆಎಲ್ಇ ಸೊಸೈಟಿಯ ನರ್ಸಿಂಗ್ ವಿಜ್ಞಾನ ಸಂಸ್ಥೆಯ ಘಟಿಕೋತ್ಸವ ಮತ್ತು ವಾರ್ಷಿಕೋತ್ಸವ ‘ಸ್ಪರ್ಶ್– 2026’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಪ್ರಸಾದ ಬಿ. ರಾಂಪುರೆ ಮಾತನಾಡಿ, ‘ಶುಶ್ರೂಷಕರು ನಿಸ್ವಾರ್ಥ ಸೇವೆಯ ಮೂಲಕ ಅಸಂಖ್ಯಾತ ಜನರ ಆಶೀರ್ವಾದ ಪಡೆಯಬಹುದು’ ಎಂದರು.

ನಾಯಕತ್ವ ಮತ್ತು ವೈಯಕ್ತಿಕ ಬೆಳವಣಿಗೆ ಕುರಿತು ಮಾರ್ಗದರ್ಶನ ಮಾಡಿದ ಮಂಗಳೂರಿನ ನ್ಯೂ ಮಂಗಳಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ರಮಣ್ಯ ನಾಯಕ್, ‘ಕೃತಕ ಬುದ್ಧಿಮತ್ತೆ (ಎಐ) ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿದ್ದರೂ, ಅದು ದಾದಿಯರಂತೆ ಚಿಕಿತ್ಸಕ ಸ್ಪರ್ಶ, ಭಾವನಾತ್ಮಕ ಬೆಂಬಲ ನೀಡಲು ಸಾಧ್ಯವಿಲ್ಲ’ ಎಂದರು.

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ನರ್ಸಿಂಗ್ನಲ್ಲಿ ಪ್ರಥಮ ರ್ಯಾಂಕ್ ಮತ್ತು ವೈದ್ಯಕೀಯ ಶಸ್ತ್ರಚಿಕಿತ್ಸಾ ನರ್ಸಿಂಗ್ನಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಚಿನ್ನದ ಪದಕ ಪಡೆದ ಝಾನ್ಸಿ ಜೊನ್ನಲಗಡ್ಡ, ಎಂ.ಎಸ್ಸಿ ನರ್ಸಿಂಗ್ನಲ್ಲಿ ದ್ವಿತೀಯ ರ್ಯಾಂಕ್, ಪ್ರಸೂತಿ ಮತ್ತು ಸ್ತ್ರೀರೋಗ ನರ್ಸಿಂಗ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಚೈತ್ರಾ ಕೊಟಗಿ ಮತ್ತು ಎಂ.ಎಸ್ಸಿ ನರ್ಸಿಂಗ್ನಲ್ಲಿ ನಾಲ್ಕನೇ ರ್ಯಾಂಕ್ ಮತ್ತು ಪಿಡಿಯಾಟ್ರಿಕ್ ನರ್ಸಿಂಗ್ನಲ್ಲಿ ಚಿನ್ನದ ಪದಕ ಪಡೆದ ದೀಪಶ್ರೀ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

102 ಪದವೀಧರರಿಗೆ (62 ಬಿ.ಎಸ್ಸಿ ನರ್ಸಿಂಗ್, 24 ಪಿ.ಬಿ.ಬಿ.ಎಸ್ಸಿ ನರ್ಸಿಂಗ್ ಮತ್ತು 16 ಎಂ.ಎಸ್ಸಿ ನರ್ಸಿಂಗ್ ಪದವೀಧರರು) ಪದವಿ ಪ್ರಮಾಣಪತ್ರ ನೀಡಲಾಯಿತು. ಬಿ.ಎಸ್ಸಿ ನರ್ಸಿಂಗ್ಮತ್ತು ಜಿಎನ್ಎಂನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಯಿತು.

ಕೆಎಲ್ಇ ಸಂಸ್ಥೆಯ ಶುಶ್ರೂಷಾ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಸಂಜಯ್. ಎಂ. ಪೀರಾಪುರ್, ಪ್ರಾಧ್ಯಾಪಕಿ ಆಶಾ ಭಾತಖಂಡೆ, ಪ್ರಾಧ್ಯಾಪಕ ಮಂಜುನಾಥ ಜಿ.ಎಸ್., ವಾಣಿ ಕೆ., ಶ್ರುತಿ ಬುಲ್ಬುಲೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-24-995772168

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.