ಹುಬ್ಬಳ್ಳಿ: ‘ಶುಶ್ರೂಷಕರ ಸೇವೆ, ಕಾಯಕ ನಿಷ್ಠೆ ಶ್ಲಾಘನೀಯ. ವೈದ್ಯರು ರೋಗಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ, ಶುಶ್ರೂಷಕರು ಭಾವನಾತ್ಮಕತೆ, ನಿರಂತರ ಉಪಸ್ಥಿತಿ ಮೂಲಕ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿ ರೋಗದಿಂದ ಗುಣಮುಖರನ್ನಾಗಿಸುತ್ತಾರೆ’ ಎಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಸೀಮಾ ಶ್ಯಾಮ್ ಭೈರಿ ಹೇಳಿದರು.

ಇಲ್ಲಿನ ವಿದ್ಯಾನಗರದ ಕೆಎಲ್ಇ ನರ್ಸಿಂಗ್ ಸೈನ್ಸ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಸೂಲಗಿತ್ತಿಯರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಶುಶ್ರೂಷಕರು ಕೇವಲ ಆರೋಗ್ಯ ಸೇವೆ ನೀಡುವವರು ಮಾತ್ರವಲ್ಲ, ಜೀವನ, ಭರವಸೆ, ಮಾನವೀಯತೆಯ ರಕ್ಷಕರು’ ಎಂದು ಅಭಿಪ್ರಾಯಪಟ್ಟರು.

ಅರಿವಳಿಕೆ ತಜ್ಞೆ ಡಾ. ಶೋಭಾ ಮುದರಡ್ಡಿ, ‘ಆಸ್ಪತ್ರೆಯನ್ನು ಖ್ಯಾತಿ, ಮೂಲಸೌಕರ್ಯದಿಂದಷ್ಟೇ ಅಲ್ಲದೆ, ಸಿಬ್ಬಂದಿಯ ಸಮರ್ಪಣೆ, ಶಿಸ್ತು, ಸಹಾನುಭೂತಿ, ಮಾನವೀಯತೆ, ಸೇವೆ ಮೂಲಕ ಗುರುತಿಸುವಂತಾಗಬೇಕು’ ಎಂದು ಹೇಳಿದರು.

ದೀಪಕ್ ಬಾಗಿ, ನರ್ಸಿಂಗ್ ಸೈನ್ಸ್ ಕಾಲೇಜು ಪ್ರಾಂಶುಪಾಲ ಡಾ. ಸಂಜಯ್ ಎಂ. ಪೀರಾಪುರ್ ಮಾತನಾಡಿದರು. ಡಾ. ಆಶಾ ಭಾತಖಂಡೆ ಸ್ವಾಗತಿಸಿದರು, ಶ್ರುತಿ ಬುಲ್ಬುಲೆ ವಂದನಾರ್ಪಣೆ, ಶರೋನ್ ಡೇನಿಯಲ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-24-836307079

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.