ಹುಬ್ಬಳ್ಳಿ: ‘ಭಾರತದಲ್ಲಿ ಹೆಚ್ಚುತ್ತಿರುವ ಪಾರ್ಶ್ವವಾಯು ನಿರ್ವಹಿಸಲು ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್ (ಐಎಸ್ಎ) ವತಿಯಿಂದ ‘ಮೆದುಳು ಉಳಿಸಿ’ ಎಂಬ ರಾಷ್ಟ್ರವ್ಯಾಪಿ ಅಭಿಯಾನ ಪ್ರಾರಂಭಿಸಲಾಗಿದೆ’ ಎಂದು ಅಸೋಸಿಯೇಷನ್ ಅಧ್ಯಕ್ಷ ಡಾ.ವಿಕ್ರಂ ಹುಡೇದ್ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಅಭಿಯಾನವು ಸಾರ್ವಜನಿಕರಲ್ಲಿ ಅರಿವು ಹೆಚ್ಚಿಸುವ, ವೈದ್ಯರಿಗೆ ತರಬೇತಿ ನೀಡುವ ಮತ್ತು ಸಕಾಲಿಕ ಚಿಕಿತ್ಸೆಗೆ ತುರ್ತು ವ್ಯವಸ್ಥೆಗಳನ್ನು ಸುಧಾರಿಸುವ ಗುರಿ ಹೊಂದಿದೆ’ ಎಂದರು.

‘ಅಭಿಯಾನದ ಭಾಗವಾಗಿ ಪಾರ್ಶ್ವವಾಯುಪೀಡಿತರ ಆರೈಕೆಗೆ ಸಣ್ಣ ನಗರಗಳಲ್ಲಿರುವ ವೈದ್ಯರಿಗೆ ತರಬೇತಿ ನೀಡಲಾಗುತ್ತಿದ್ದು, ಇದು ರೋಗಪರೀಕ್ಷೆ ಮತ್ತು ಚಿಕಿತ್ಸೆಯಲ್ಲಿ ತಡವಾಗುವುದನ್ನು ಕಡಿಮೆ ಮಾಡಲಿದೆ’ ಎಂದು ಹೇಳಿದರು.

‘ಶೇ 14ರಷ್ಟು ಪ್ರಕರಣಗಳಲ್ಲಿ 45ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಪಾರ್ಶ್ವವಾಯು ಕಾಣಿಸಿಕೊಳ್ಳುತ್ತಿದೆ. ಇತ್ತೀಚಿನ ದತ್ತಾಂಶದ ಪ್ರಕಾರ ಶೇ 20ರಷ್ಟು ರೋಗಿಗಳು ಮಾತ್ರ ನಾಲ್ಕೂವರೆ ಗಂಟೆಗಳ ಅಮೂಲ್ಯ ಅವಧಿಯಲ್ಲಿ ಆಸ್ಪತ್ರೆ ಸೇರಲು ಸಾಧ್ಯವಾಗುತ್ತದೆ’ ಎಂದರು.

ನರರೋಗ ತಜ್ಞ ಡಾ. ಅರವಿಂದ್ ಶರ್ಮಾ ಮಾತನಾಡಿ, ‘ಭಾರತದಲ್ಲಿ ಪಾರ್ಶ್ವವಾಯು ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವುದು ಕಳವಳಕಾರಿ. ದೇಶಕ್ಕೆ ವಿಶೇಷವಾದ ಸ್ಟ್ರೋಕ್ ಸೆಂಟರ್ಗಳು, ಉತ್ತಮ ತರಬೇತಿ ಪಡೆದ ವೈದ್ಯರು ಮತ್ತು ಸಾರ್ವಜನಿಕರಲ್ಲಿ ಅರಿವಿನ ಅಗತ್ಯವಿದೆ’ ಎಂದು ಹೇಳಿದರು.

‘ಮೆದುಳನ್ನು ಉಳಿಸಿ: ವೇಗವಾಗಿ ಕ್ರಮ ಕೈಗೊಳ್ಳಿ, ಜೀವಗಳನ್ನು ಉಳಿಸಿ’ ಘೋಷವಾಕ್ಯದಡಿ ವೈದ್ಯರಿಗೆ ವಿಶೇಷ ತರಬೇತಿ ಕಾರ್ಯಕ್ರಮ ನಡೆಯಿತು. ವೈದ್ಯರಾದ ರಾಜೇಂದ್ರ ದುಗಾಣಿ, ಅಮಿತ್ ಕುಲಕರ್ಣಿ, ಭೂಷಣ ಉಪಾಧ್ಯೆ, ನಾಸಿಕ್ನ ಶ್ರೀಪಾದ ಶಾ ಇದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-24-897381050

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.