ಹುಬ್ಬಳ್ಳಿ: ‘ಪದವಿ ಪಡೆದ ವಿದ್ಯಾರ್ಥಿಗಳು ಆವಿಷ್ಕಾರದಲ್ಲಿ ತೊಡಗಿ, ಸದೃಢ ದೇಶ ನಿರ್ಮಿಸಲು ಶ್ರಮಿಸಬೇಕು. ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ.ಖಾನ್ ಹೇಳಿದರು.

ಇಲ್ಲಿನ ಪಿ.ಸಿ.ಜಾಬಿನ್ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ನಡೆದ 14ನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪದವಿಯನ್ನು ಸಮಾಜ ಸೇವೆಯ ಸಾಧನ ಆಗಿಸಿಕೊಳ್ಳಬೇಕು. ನಿರಂತರ ಕಲಿಕೆ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು’ ಎಂದರು.

‘ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಗುರುತರ ಸಾಧನೆ ಮಾಡುವುದರ ಜೊತೆಗೆ ದೇಶದ ಸ್ವಾಯತ್ತತೆ, ಸಂಸ್ಕೃತಿಗೂ ಕೊಡುಗೆ ನೀಡಿ. ಭಾರತವನ್ನು ವಿಶ್ವಗುರು ಆಗಿಸಲು ಎಲ್ಲರೂ ಒಗ್ಗೂಡಬೇಕು. ದೇಶಕ್ಕೆ ಅಗತ್ಯವಿರುವುದನ್ನು ನೀಡುವ ದೊಡ್ಡ ಜವಾಬ್ದಾರಿ ಪದವೀಧರರ ಮೇಲಿದೆ’ ಎಂದು ಹೇಳಿದರು.

ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಶ್ರೀನಿವಾಸ್ ಎಸ್.ಬಳ್ಳಿ ಮಾತನಾಡಿ, ‘ಶಿಕ್ಷಣ ಪಡೆದವರು ಸಮಾಜದ ಆಸ್ತಿ ಹಾಗೂ ದೇಶದ ಶಕ್ತಿಯಾಗಿದ್ದು, ಸಮಾಜದ ಒಳಿಗೆ ತಮ್ಮ ಜ್ಞಾನ ವಿನಿಯೋಗಿಸಬೇಕು’ ಎಂದರು.

‘ಕೃತಕ ಬುದ್ಧಿಮತ್ತೆಯು ಉದ್ಯೋಗ ಹಾಗೂ ಸೃಜನಶೀಲತೆಗೆ ಕುತ್ತು ತಂದಿದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಗಮನಹರಿಸಬೇಕು. ಜನರೇಷನ್ ಝಡ್ (ಜೆನ್ ಝೀ) ಅವಸರದ ಕೂಸಾ ಗಿದ್ದು, ಧಾವಂತದಲ್ಲಿ ಸಾಮಾಜಿಕ ವ್ಯವಸ್ಥೆ, ಕೌಟುಂಬಿಕ ಪದ್ಧತಿಯಿಂದ ವಿಮುಖ ಆಗಾಬಾರದು’ ಎಂದು ತಿಳಿಸಿದರು.

ಕೆಎಲ್ಇ ಸೊಸೈಟಿ ಆಡಳಿತ ಮಂಡಳಿಯ ಸಲಹಾ ಮಂಡಳಿ ಸದಸ್ಯ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ಸಂಧ್ಯಾ ಆರ್.ಕುಲಕರ್ಣಿ ಮಾತನಾಡಿದರು. ಕರ್ನಾಟಕ ವಿ.ವಿ. ಮೌಲ್ಯಮಾಪನ ಕುಲಸಚಿವ ಎನ್.ವೈ.ಮಟ್ಟಿಹಾಳ್, ಕೆಎಲ್ಇ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಮಂಜುನಾಥ ಎಸ್.ಮುನವಳ್ಳಿ, ಕಾಲೇಜಿನ ಪರೀಕ್ಷಾ ನಿಯಂತ್ರಕ ಮಹಾಂತೇಶ ಎಂ., ಉದ್ಯಮಿ ವೀರೇಶ ಶರ್ಮ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-24-472481272

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.