ಹುಬ್ಬಳ್ಳಿ: ‘ವಿಶ್ವದಾದ್ಯಂತ ಸ್ಪರ್ಧಾತ್ಮಕತೆ ಹೆಚ್ಚಾಗುತ್ತಿದೆ. ಅಮೆರಿಕದಲ್ಲಿ ವಿದ್ಯಾರ್ಥಿಗಳು ಶಾಲಾ ಹಂತದಲ್ಲೇ ತಮ್ಮನ್ನು ಸ್ಪರ್ಧೆಗೆ ನವೀಕರಿಸಿಕೊಳ್ಳುವ ಗುಣ ಬೆಳೆಸಿಕೊಳ್ಳುತ್ತಾರೆ. ಹೀಗಾಗಿ, ವಿದ್ಯಾರ್ಥಿಗಳು ಸವಾಲು ಎದುರಿಸಲು ಸಿದ್ಧರಾಗಬೇಕು’ ಎಂದು ಉದ್ಯಮಿ ವಿ.ಎಸ್.ವಿ. ಪ್ರಸಾದ್ ಹೇಳಿದರು.

ನಗರದ ಚೇತನ್ ಬಿಸಿನೆಸ್ ಸ್ಕೂಲ್ನಿಂದ ಏರ್ಪಡಿಸಿದ ಮೂರು ದಿನಗಳ ‘ಮ್ಯಾನೇಜ್ಮೆಂಟ್ ಫೆಸ್ಟ್’ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಜೀವನದಲ್ಲಿ ಯಶಸ್ಸು ಸಾಧಿಸಲು ಶಿಸ್ತು, ಸಮರ್ಪಣೆ ಹಾಗೂ ದೂರದೃಷ್ಟಿ ಅತ್ಯವಶ್ಯಕ. ಕೃತಕ ಬುದ್ಧಿಮತ್ತೆಯನ್ನು ಸದುಪಯೋಗಕ್ಕಾಗಿ ಬಳಸಿಕೊಳ್ಳುವುದುಸ್ವಾಗತಾರ್ಹ. ಆದರೆ, ಅದರ ಮೇಲೆ ಸಂಪೂರ್ಣ ಅವಲಂಬನೆ ಆಗುವುದು ಒಳ್ಳೆಯದಲ್ಲ’ ಎಂದು ತಿಳಿಸಿದರು.

ಅಮೆರಿಕದ ‘ಅರ್ಲಿ ವಾರ್ನಿಂಗ್ ಸರ್ವಿಸಸ್’ ಸಂಸ್ಥೆಯ ಉಪಾಧ್ಯಕ್ಷೆ ವಿಶ್ಲೇಷಾ ಪಾಟೀಲ ಮಾತನಾಡಿ, ‘ಇಂತಹ ಕಾರ್ಯಕ್ರಮಗಳಿಂದಾಗಿ ವಿದ್ಯಾರ್ಥಿಗಳಲ್ಲಿಸೃಜನಶೀಲತೆ, ವ್ಯಕ್ತಿತ್ವ ವಿಕಾಸ ಹಾಗೂ ನಾಯಕತ್ವ ಗುಣಗಳನ್ನು ಬೆಳೆಯಲು ಸಹಕಾರಿ ಆಗುತ್ತದೆ’ ಎಂದು ಹೇಳಿದರು.

ಹು–ಧಾ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ‘ವಿದ್ಯಾರ್ಥಿಗಳು ನ್ಯಾಯ, ಗೌರವ, ಕ್ರೀಡಾ ಸ್ಫೂರ್ತಿಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮದ ಸಂಯೋಜಕ ಪ್ರೊ.ಶ್ರೇಯಸ್ ಮುರ್ಡೇಶ್ವರ ಮಾತನಾಡಿದರು. ಪ್ರೊ. ರಾಮಕಾಂತ ಕುಲಕರ್ಣಿ ಅವರು ಸಂಸ್ಥೆಯ ಹಿನ್ನೆಲೆ ಮತ್ತು ಬೆಳವಣಿಗೆಯ ಕುರಿತು ವಿವರಿಸಿದರು.

ಪ್ರೊ. ಮಣಿಕ್ ಸ್ವಾಗತಿಸಿದರು. ಪ್ರೊ. ಶ್ರೇಯಸ್ ಮುರ್ಡೇಶ್ವರ, ಪ್ರೊ. ಮಂಗಳಾ ಯರಗಟ್ಟಿ ಅವರು ಅತಿಥಿಗಳ ಪರಿಚಯ ಮಾಡಿಕೊಟ್ಟರು. ಪ್ರೊ.ಅನಿರುದ್ಧ ಅಂಕೋಲೇಕರ್ ವಂದಿಸಿದರು. ವಿದ್ಯಾರ್ಥಿ ಸಂಯೋಜಕ ಕಾವೇರಿ ಕುಲಕರ್ಣಿ, ಮೋಹಿತ್ ಧರ್ಮದಾಸ್ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-24-856252241

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.