ಹುಕ್ಕೇರಿ: ಅಂಗನವಾಡಿ ಕೇವಲ ಊಟ ಕೊಡುವ ಕೇಂದ್ರವಲ್ಲ. ಮಗುವಿನ ದೈಹಿಕ, ಮಾನಸಿಕ, ಭಾವನಾತ್ಮಕ ಬೆಳವಣಿಗೆಗೆ ಇದು ಮೊದಲ ಮೆಟ್ಟಿಲು. ಹಾಗಾಗಿ ಅಂಗನವಾಡಿಯನ್ನು 'ಮೊದಲ ಶಾಲೆ' ಎಂದು ಪರಿಗಣಿಸಿ ಕಾರ್ಯಕರ್ತೆಯರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಸಿಡಿಪಿಒ ಹೊಳೆಪ್ಪ ಎಚ್ ಹೇಳಿದರು.

ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಭಾ ಭವನದಲ್ಲಿ ನಡೆದ ‘ಶಾಲಾ ಸಿದ್ಧತಾ ಮೇಳ’ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಚಿಕ್ಕ ವಯಸ್ಸಿನಲ್ಲಿ ಸಿಗುವ ಪೌಷ್ಟಿಕ ಆಹಾರ, ಪ್ರೀತಿ, ಸುರಕ್ಷತೆ ಮತ್ತು ಉತ್ತೇಜಕ ವಾತಾವರಣವು ಮುಂದಿನ ಶಿಕ್ಷಣಕ್ಕೆ ಭದ್ರ ಬುನಾದಿ. ಭಾಷೆ, ಸಾಮಾಜಿಕ ಕೌಶಲ್ಯ, ಯೋಚನಾ ಶಕ್ತಿ ಬೆಳೆಯಲು ಮೊದಲ 6 ವರ್ಷಗಳು ಬಹಳ ಮುಖ್ಯ ಎಂದು ಹೇಳಿದರು.

ಶಿಶು ಅಭಿವೃದ್ಧಿ ಸಹಾಯಕ ಯೋಜನಾಧಿಕಾರಿ ಕಮಲಾ ಹಿರೇಮಠ ಮಹಾದೇವ ಕೋಳಿ ಮಾತನಾಡಿ, ಚಿಕ್ಕಮಕ್ಕಳಿಗೆ ಶಿಕ್ಷಣದ ಜತೆ ಶಿಸ್ತಿನ ಜಾಗೃತಿಯೂ ಅಗತ್ಯ ಎಂದು ಹೇಳಿದರು. ತರಬೇತುದಾರ ಸರಸ್ವತಿ, ಪ್ರಥಮ ಸಂಸ್ಥೆ ಸಿಬ್ಬಂದಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-21-1496377343

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.