ಹುಕ್ಕೇರಿ: ‘ಮಹಾತ್ಮ ಗಾಂಧೀಜಿಯವರ ಸರಳ ಜೀವನದ ಜತೆ ಉನ್ನತ ವಿಚಾರದ ಬದುಕು ನಮಗೆ ಕಲಿಸಿ ಕೊಟ್ಟಿದ್ದಾರೆ. ಇಂದಿನ ಯುವಕರು ಗಾಂಧಿ ವಿಚಾರಗಳನ್ನು ಅರ್ಥಮಾಡಿಕೊಂಡು ದೇಶದ ಒಳಿತಿಗೆ ಶ್ರಮಿಸಬೇಕು ಮತ್ತು ಶಾಂತಿಯುತ ಸಮಾಜ ನಿರ್ಮಿಸಬೇಕಾಗಿದೆ’ ಎಂದು ಬೆಂಗಳೂರಿನ ಟಿ.ದಾಸರಹಳ್ಳಿ ಸರ್ಕಾರಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಮತ್ತು ಸ್ಮಾರಕ ನಿಧಿಯ ಸಂಯೋಜಕಿ ಡಾ.ಅಬೀದಾ ಬೇಗಮ್ ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಎನ್.ಎಸ್.ಎಸ್.ಘಟಕ ಮತ್ತು ಇತಿಹಾಸ ವಿಭಾಗದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ಯುವಕರಿಗೆ ಗಾಂಧೀಜಿ ವಿಚಾರಗಳ ಪ್ರಸ್ತುತತೆ’ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಪ್ರಾಧ್ಯಾಪಕ, ಸಿಡಿಸಿ ಸದಸ್ಯ ಪಿ.ಜಿ.ಕೊಣ್ಣೂರ್ ಮಾತನಾಡಿದರು. ಸೋಲಾಪುರದ ಪಿಎಸ್ಎಎಚ್ ವಿ.ವಿ ಸಿನೆಟ್ ಸದಸ್ಯ ಪ್ರೊ.ಧನ್ಯಕುಮಾರ ಬಿರಾಜದಾರ ‘ಸಮಕಾಲಿನಸಂದರ್ಭದಲ್ಲಿ ಮಹಾತ್ಮ ಗಾಂಧಿ’ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಪ್ರೊ.ವಿರೂಪಾಕ್ಷಿ ಪಾಟೀಲ್, ಡಾ.ಅಬೀದಾ ಬೇಗಮ್, ಡಾ.ಮಲ್ಲಿಕಾರ್ಜುನ ದಲಾಲ, ಚನ್ನಮ್ಮನ ಕಿತ್ತೂರಿನ ಎಸ್.ಬಿ.ಎಂ.ಸರ್ಕಾರಿ ಹೈಸ್ಕೂಲಿನ ಉಪಪ್ರಾಚಾರ್ಯ ಮಹೇಶ್ ಚನ್ನಂಗಿ, ಪ್ರೊ.ಬಸವರಾಜ ವಾಸನ್, ಸಿಡಿಸಿ ಸದಸ್ಯೆ ಲೀಲಾವತಿ ರಜಪೂತ, ಡಾ.ಸಂದೀಪ ಸಾಳುಂಕೆ, ಪ್ರೊ.ಸುರೇಶ್ ಮುರುಮಕರ್, ಗ್ರಂಥಪಾಲಕಿ ಆರತಿ ಕಬ್ಬೂರಿ, ಡಾ.ನಿರಂಜನ ಪಾಟೀಲ, ಪ್ರೊ.ಶೀತಲ್ ತಳವಾರ, ಡಾ.ಎಂ.ಎಸ್.ಕರಾಡೆ, ಪ್ರೊ.ರೇಣುಕಾ ಹಿರೇಮನಿ ಇದ್ದರು. ಸಂಘಟನಾ ಕಾರ್ಯದರ್ಶಿ ಪ್ರೊ.ರವಿ ಪಾಟೀಲ್ ಸ್ವಾಗತಿಸಿದರು. ಡಾ.ಶ್ರೀಶೈಲ್ ಮಠಪತಿ ನಿರೂಪಿಸಿದರು. ಸಾಂಸ್ಕೃತಿಕ ಸಂಘದ ಸಂಯೋಜಕ ಡಾ.ಸತೀಶ್ ಮೊಹಿತೆ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-21-853163900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.