ಹುಕ್ಕೇರಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ 15 ರಿಂದ 29 ವರ್ಷದವರೆಗಿನ ಯುವಕರು ಶೇ 40ರಷ್ಟು ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಅಂಶ ಆತಂಕಕಾರಿ ವಿಷಯ. ಈ ನಿಟ್ಟಿನಲ್ಲಿ ಯುವಕರಿಗೆ ಕಾನೂನು ಅರಿವು ಮೂಡಿಸಲು ಕಾನೂನು ಸೇವಾ ಸಮಿತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿಯೂ ಆದ ಜೆ.ಎಂ.ಎಫ್.ಸಿ ನ್ಯಾಯಾಧೀಶ ಆದಿತ್ಯ ಕಲಾಲ್ ತಿಳಿಸಿದರು.

ಬುಧವಾರ ಪಟ್ಟಣದ ಎಸ್ಎಸ್ಎನ್ ಕಾಲೇಜಿನ ಸಹಯೋಗದೊಂದಿಗೆ ಹಮ್ಮಿಕೊಂಡ ‘ಕಾನೂನು ಅರಿವು ನೆರವು’ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಉಪಾಧ್ಯಕ್ಷ ಬಸವರಾಜ ಜಿನರಾಳಿ, ಕಾರ್ಯದರ್ಶಿ ಎಸ್.ಜಿ.ನದಾಫ, ಆಶಾ ಸಿಂಗಾಡಿ, ನರೇಗಾ ಸಹಾಯಕ ನಿರ್ದೇಶಕ ಶ್ರೀಶೈಲ್ ಮಠದ ಸಭೆ ಉದ್ಧೇಶಿಸಿ ಮಾತನಾಡಿದರು.

ಉಪನ್ಯಾಸ: ವಕೀಲೆ ಲಾವಣ್ಯ ಸಂಸುದ್ದಿ ‘ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಆದಾಯ ತೆರಿಗೆ ಕಾಯ್ದೆ 2025’, ವಕೀಲೆ ಸ್ನೇಹಾ ಬಸವಣ್ಣಿ ದೊಡ್ಡಮನಿ ‘ಡಿಜಿಟಲ್ ದತ್ತಾಂಶ ಸಂರಕ್ಷಣಾ ಕಾಯ್ದೆ 2023 ಮತ್ತು ಆನ್ ಲೈನ್ ಗೇಮಿಂಗ್ ಕಾಯ್ದೆ 2025’, ಆಶಾ ಸಿಂಗಾಡಿ ‘ಪೋಕ್ಸೊ ಕಾಯ್ದೆ 2012’, ಪಿಎಸ್ಐ ಸತೀಶ್ ಹಿರೆಕುರಬರ ‘ಆಧುನಿಕ ಪೊಲೀಸ್ ವ್ಯವಸ್ಥೆ, ರ್ಯಾಗಿಂಗ್ ಮತ್ತು ಟ್ರಾಫಿಕ್’ ಕುರಿತು ಉಪನ್ಯಾಸ ನೀಡಿದರು. ಸಿ.ಎಸ್.ತುಬಚಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಹಿರಿಯ ವಕೀಲ ಶಿವರುದ್ರಪ್ಪ (ಅಣ್ಣು) ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಎಜಿಪಿ ಅನೀಲ ಕರೋಶಿ, ಎಪಿಪಿ ಶೇಖರ್ ಭಡಗಾಂವೆ, ಮಹಿಳಾ ಪ್ರತಿನಿಧಿ ಅನಿತಾ ಕುಲಕರ್ಣಿ, ಪ್ರಾಚಾರ್ಯೆ ಸರ್ವಮಂಗಳಾ ಕಮತಗಿ, ಕೃಷಿ ಅಧಿಕಾರಿ ಶಿವಾನಂದ ಕಾಮತ, ಎಸಿಡಿಪಿಒ ಕಮಲಾ ಹಿರೇಮಠ, ಪ್ರೊ ಬಿ.ಎಂ.ವಾಲಿ, ಎಂ.ಪಿ.ಬಳ್ಳಾರಿ, ಎಸ್.ಎ.ಮರೆಪ್ಪಗೋಳ, ಶಿತಲ್ ತಳವಾರ, ಜ್ಯೋತಿ ಗುರವ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿನಿ ಸೋನಾಲಿ ಪ್ರಾರ್ಥಿಸಿದರು. ವಕೀಲ ಎಲ್.ಎಸ್.ಕೋಚರಿ ಸ್ವಾಗತಿಸಿದರು. ಪ್ರೊ.ಸೋಮಶೇಖರಪ್ಪ ನಿರೂಪಿಸಿದರು. ಪ್ರೊ.ಶಶಿಕಾಂತ ಮರೆಪ್ಪಗೋಳ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-21-1557068242

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.