ಹುಕ್ಕೇರಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಹುಬ್ಬಳ್ಳಿ ಮೂಲದ ದೇಶಪಾಂಡೆ ಫೌಂಡೇಶನ್ ಸಹಯೋಗದಲ್ಲಿ ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನ ಮಾಡಲು ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ಎರಡನೇ ಹಂತದ ಕೌಶಲ ಅಭಿಯಾನದ ‘ಸ್ಕಿಲ್ ಪ್ಲಸ್ ಯೋಜನೆ’ ಹಮ್ಮಿಕೊಂಡಿದೆ ಎಂದು ಕುಲಸಚಿವ ಸಂತೋಷ ಕಾಮಗೌಡರ ಹೇಳಿದರು.

ಸ್ಥಳೀಯ ಎಸ್.ಎಸ್.ಎನ್.ಕಾಲೇಜಿನಲ್ಲಿ ಸೋಮವಾರ ನಡೆದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ತಮ್ಮ ವಿಶ್ವವಿದ್ಯಾಲಯದಡಿಯ 341 ಕಾಲೇಜುಗಳ ಪೈಕಿ ಈಗಾಗಲೇ 4 ಕಾಲೇಜುಗಳಲ್ಲಿ ಪ್ರಾಯೋಗಿಕ ಪರೀಕ್ಷೆ ಮಾಡಲಾಗಿದ್ದು, ಈಗ 40 ಕಾಲೇಜುಗಳಲ್ಲಿ ಕಾರ್ಯಗತ ಮಾಡಲು ವಿಶ್ವವಿದ್ಯಾಲಯ ನಿರ್ಧರಿಸಿದೆ’ ಎಂದರು.

‘ವಿದ್ಯಾರ್ಥಿಗಳು ಸ್ಕಿಲ್ ಪ್ಲಸ್ ತರಬೇತಿ ಮೂಲಕ ಮಾಹಿತಿ ತಂತ್ರಜ್ಞಾನ, ಸಂವಹನ ಕಲೆ, ತರ್ಕಬುದ್ಧಿ ಕಲಿಕೆ, ಭಾಷಾ ಕಲಿಕೆ ಕಲಿತು ವ್ಯಕ್ತಿತ್ವದ ಆಂತರಿಕ ಬದಲಾವಣೆ ಮಾಡಿಕೊಂಡು ಪೈಪೋಟಿ ಎದುರಿಸಲು ಸನ್ನದ್ಧರಾಗಬೇಕು’ ಎಂದು ತಿಳಿಸಿದರು.

ತರಬೇತಿಯು ಎರಡು ರೀತಿಯಿದ್ದು, ಅಂತಿಮ ವರ್ಷದ ಪದವೀಧರರಿಗೆ ಮೂರು ತಿಂಗಳು ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಒಂದು ವರ್ಷದ ತರಬೇತಿ ಇದ್ದು, ₹10 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ ಎಂದರು.

ದೇಶಪಾಂಡೆ ಫೌಂಡೇಶನ್ ತರಬೇತುದಾರರು ತರಬೇತಿ ನೀಡುವರು ಎಂದು ತಿಳಿಸಿದರು. ಪ್ರಾಚಾರ್ಯೆ ಸರ್ವಮಂಗಲ ಕಮತಗಿ ಅಧ್ಯಕ್ಷತೆ ವಹಿಸಿದ್ದರು.

ದೇಶಪಾಂಡೆ ಫೌಂಡೇಶನ್ ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ ಕುರಿ, ಕಿರಣ ಪಟ್ಟಣಶೆಟ್ಟಿ, ಪ್ರೇಮಾ ಕೋರಿ, ದಶರಥ ಸುಣಗಾರ, ಶಿವರಾಜ ರಾಚನ್ನವರ ತರಬೇತಿ ನೀಡಿದರು. ಕಾಲೇಜಿನ ಸಿಬ್ಬಂದಿ, ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರೇಮಾ ಪಾಟೀಲ ಪ್ರಾರ್ಥಿಸಿದರು. ಪ್ರೊ.ಪ್ರಣವ ಪಾಟೀಲ ಸ್ವಾಗತಿಸಿದರು. ಸೋಮಶೇಖರಪ್ಪ ನಿರೂಪಿಸಿದರು. ಪ್ರೊ.ಶಶಿಕಾಂತ ಮರೆಪ್ಪಗೋಳ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-21-1699916030

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.