ಹುಕ್ಕೇರಿ: ವಿದ್ಯಾರ್ಥಿ ಜೀವನದ ಜತೆ ಕೌಶಲ್ಯ ಬೆಳೆಸುವ ತರಬೇತಿ ಪಡೆದು ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡರ ಹೇಳಿದರು.

ಮಂಗಳವಾರ ಆರ್ಸಿಯು ಮತ್ತು ಹುಬ್ಬಳ್ಳಿ ಮೂಲದ ದೇಶಪಾಂಡೆ ಪೌಂಡೇಶನ್ ಸಹಯೋಗದಲ್ಲಿ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಸ್ಕಿಲ್ ಪ್ಲಸ್ ಪ್ರೊಗ್ರಾಮ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತರಬೇತಿಯ ವಿವರ ನೀಡಿದ ಅವರು, ವಿದ್ಯಾರ್ಥಿಗಳು ತರಬೇತಿಯಲ್ಲಿ ಆಧುನಿಕ ತಂತ್ರಜ್ಞಾನದ ಮಾಹಿತಿ, ಕಂಪ್ಯೂಟರ್ ಜ್ಞಾನ, ತರ್ಕಬುದ್ಧಿಮತ್ತೆ, ಭಾಷಾ ಪ್ರಾವಿಣ್ಯತೆ, ಸಂವಹನ ಕಲೆ, ವ್ಯಕ್ತಿತ್ವ ವಿಕಸನ ಕಲಿಯಬೇಕು. ಸಂದರ್ಶನದ ವೇಳೆ ದೃಢತೆ ಇರಬೇಕು. ಕಲಿತ ಜ್ಞಾನದಿಂದ ಉತ್ತರಿಸಿ ಉನ್ನತ ಹುದ್ದೆ ಪಡೆಯಲು ಸಲಹೆ ನೀಡಿದರು.ಪ್ರಾಚಾರ್ಯ ಪ್ರಕಾಶ ಲಕ್ಷೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತರಬೇತಿ: ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ ಕುರಿ, ಕಿರಣ ಪಟ್ಟಣಶೆಟ್ಟಿ, ರಾಘವೇಂದ್ರ ಪವಾರ್, ದಶರಥ ಸುಣಗಾರ, ಶಿವರಾಜ ರಾಚನ್ನವರ, ಪ್ರೇಮಾ ಕೋರೆ, ಅನೀಲ ತರಬೇತಿ ನೀಡಿದರು. ಸಿಡಿಸಿ ಸದಸ್ಯ ಪಿ.ಜಿ.ಕೊಣ್ಣೂರ್, ಐಕ್ಯೂಎಸಿ ಸಂಯೋಜಕ ಬಸವರಾಜ ವಾಸನ್, ಪ್ಲೇಸಮೆಂಟ್ ಆಫೀಸರ್ ವೈ.ಎಸ್.ಢಾಂಗೆ, ಡಾ.ಸತೀಶ ಮೊಹಿತೆ, ಎಂ.ಎಸ್.ಕರಾಡೆ, ಡಾ.ಶ್ರೀಶೈಲ್ ಮಠಪತಿ, ಪ್ರೊ.ಆನಂದ, ಪ್ರೊ.ವಿರೂಪಾಕ್ಷಿ ಪಾಟೀಲ ಸೇರಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ಲೇಸ ಮೆಂಟ್ ಆಫೀಸರ್ ವೈ.ಎಸ್.ಢಾಂಗೆ ಸ್ವಾಗತಿಸಿದರು. ಪ್ರೊ.ರಾಣಿ ರತ್ನಪ್ರಭಾ ನಿರೂಪಿಸಿದರು. ಡಾ.ಸಂದೀಪ ಸಾಳುಂಕೆ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-21-430328948

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.