ಹುಕ್ಕೇರಿ: ಮೂವತ್ತು ವರ್ಷದ ಹಿಂದೆ ವಿದ್ಯೆ ಕಲಿಸಿದ ಗುರುಗಳನ್ನು ಸತ್ಕರಿಸಿ ಗೌರವಿಸುವುದು ವಿದ್ಯಾರ್ಥಿಗಳಲ್ಲಿರುವ ಗುರು ಭಕ್ತಿಯನ್ನು ತೋರಿಸುತ್ತದೆ ಎಂದು ಹಿರಿಯ ಸಾಹಿತಿ ಎಸ್.ಎಂ. ಶಿರೂರ ಹೇಳಿದರು.

ತಾಲ್ಲೂಕಿನ ಹಿಡಕಲ್ ಡ್ಯಾಂನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ಭಾನುವಾರ ನಡೆದ ಪ್ರಾಥಮಿಕ ಮತ್ತು ಎಚ್.ಡಿ.ಪಿ ಪ್ರೌಢಶಾಲೆಯ 1994-95ನೇ ಸಾಲಿನ ಎಸ್.ಎಸ್.ಎಲ್.ಸಿ ಸಹಪಾಠಿಗಳು ಹಮ್ಮಿಕೊಂಡಿದ್ದ ‘ಗುರು ನಮನ ಹಾಗೂ ಸ್ನೇಹ ಸಮ್ಮಿಲನ’ದಲ್ಲಿ ಮಾತನಾಡಿದರು.

ಜನರು ಗುರುಗಳಿಂದ ಕಲಿತ ಉತ್ತಮ ಶಿಕ್ಷಣ, ಸಂಸ್ಕಾರ, ಮಾನವೀಯ ಮೌಲ್ಯ ತಮ್ಮ ಮಕ್ಕಳಿಗೂ ಕಲಿಸಿ ಒಳ್ಳೆಯ ನಾಗರಿಕರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಮುಖ್ಯ ಶಿಕ್ಷಕ ಎಂ.ಎನ್. ಮಗದುಮ್ಮ ಮಾತನಾಡಿ, ಗುರುಕುಲ ಶಿಕ್ಷಣ ಪದ್ಧತಿಯು ಕಡಿಮೆಯಾಗುತ್ತಿದ್ದು, ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ತೊಡಗಿದ್ದಾರೆ. ಎಷ್ಟೇ ದೊಡ್ಡ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ, ಕಲಿಸಿದ ಶಾಲಾ ಶಿಕ್ಷಕರಿಗೆ ಅಭಿಮಾನ ಗೌರವ ನೀಡಿ ಜೀವನದಲ್ಲಿ ಒಳ್ಳೆಯ ಗುಣ ಪಾಲಿಸಲು ಸಲಹೆ ನೀಡಿದರು.

ನಿವೃತ್ತ ಶಿಕ್ಷಕರಾದ ಆರ್.ಜಿ. ತಿಮ್ಮಾಪುರ, ಎಸ್.ಡಿ. ಮುರಗೋಡ, ಐ.ಎಸ್. ಬೆಟಗೇರಿ ಮಾತನಾಡಿದರು.

ಸತ್ಕಾರ: ವಿದ್ಯಾರ್ಥಿಗಳು ತಮಗೆ ಕಲಿಸಿದ ಶಿಕ್ಷಕರನ್ನು ಸತ್ಕರಿಸಿ ಗೌರವಿಸಿದರು. ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಾದ ಎಸ್.ಬಿ ಪತ್ತಾರ, ಆರ್.ಆರ್ ನಾಡಗೌಡ, ಸಿ.ಎಂ ಕಬ್ಬಲಿಗಾರ, ಬಿ.ಎಸ್ ಹಂಚಿನಾಳಕರ, ಎಂ.ಕೆ ನೊಗನಿಹಾಳ, ವೈ.ಎಂ .ಕೊಳದೂರ, ಶಿಕ್ಷಕಿ ಕೊಳದೂರ, ಎಂ.ಬಿ ಬಡಿಗೇರ, ಎಸ್.ಎಸ್ ಬಡಿಗೇರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-21-1141992297

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.