ಹುಕ್ಕೇರಿ: ‘ಜೀವನದಲ್ಲಿ ಮಾರ್ಗ ತೋರಿಸಿ, ವಿದ್ಯೆ ಬುದ್ಧಿ ಕಲಿಸಿ, ತನ್ನ ಕೈಯಲ್ಲಿ ಕಲಿತ ವಿದ್ಯಾರ್ಥಿ ಉನ್ನತ ಹುದ್ದೆ ಅಥವಾ ಗಣ್ಯ ವ್ಯಕ್ತಿಯಾದಲ್ಲಿ ಶಿಕ್ಷಕರು ಪಡುವ ಸಂತೋಷದಷ್ಟು ಬೇರೆ ಮತ್ಯಾರು ಪಡುವುದಿಲ್ಲ’ ಎಂದು ಹಿರೇಮಠದ ಚಂದ್ರಶೇಖರ್ ಸ್ವಾಮೀಜಿ ಹೇಳಿದರು.

ಪಟ್ಟಣದ ಕೋಷ್ಟಿ ಭವನದಲ್ಲಿ ಸ್ಥಳೀಯ ಎಸ್.ಕೆ.ಹೈಸ್ಕೂಲಿನ 2001–02ನೇ ಸಾಲಿನ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ‘ಸ್ನೇಹ ಸಂಭ್ರಮ ಮತ್ತು ಗುರು ವಂದನೆ’ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.

ಎಸ್.ಎಸ್.ಎನ್. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪಿ.ಜಿ. ಕೊಣ್ಣೂರ್ ಮಾತನಾಡಿ, ‘25 ವರ್ಷದ ಹಿಂದೆ ಕಲಿತು ಇಂದು ಬೇರೆ ಬೇರೆ ವೃತ್ತಿಯಲ್ಲಿ ತೊಡಗಿ, ಸಮಾಜದಲ್ಲಿ ಗುರುತಿಸಿಕೊಂಡು ತಮಗೆ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸುವ ವಿದ್ಯಾರ್ಥಿಗಳ ಕಾರ್ಯ ಮಾದರಿ’ ಎಂದರು.

ನಿವೃತ್ತ ಶಿಕ್ಷಕರಾದ ರಾಷ್ಟ್ರ ಪ್ರಶಸ್ತಿ ವಿಜೇತ ಎಸ್.ಐ. ಸಂಬಾಳ, ಸಿ.ಎಂ.ದರಬಾರೆ, ಜೆ.ಎಂ. ಹವಾಲ್ದಾರ್, ಶಿಕ್ಷಕಿ ಜೆ.ಕೆ.ಕರನಿಂಗ, ಜೆ.ಬಿ.ಸಂಕಪಾಳ ಮಾತನಾಡಿದರು. ನಿವೃತ್ತ ಉಪಪ್ರಾಚಾರ್ಯ ಬಿ.ಎಸ್.ಮುನವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಹಳೆಯ ವಿದ್ಯಾರ್ಥಿಗಳಾದ ಮಹೇಶ್ ಕುರಬರ್, ಸದಾನಂದ ಬಾಗಿ, ಶಿವಾನಂದ ಹೆಬ್ಬಾಳ, ಚಂದ್ರವ್ವ ಮುತಗಿ, ಪಲ್ಲವಿ ತಾರಳಿ, ಅಶ್ವಿನಿ ಅಡಿಕೆ, ಅಶ್ವಿನಿ ಚಿನ್ನಣ್ಣವರ ಮಾತನಾಡಿದರು.

ನಿವೃತ್ತ ಉಪಪ್ರಾಚಾರ್ಯ ಸುರೇಶ್ ಬುರ್ಜಿ, ಎಸ್.ಆರ್.ನಾವಲಗಿ, ಬಾಳು ಹಿಡಕಲ್, ಪಿ.ಪಿ.ಖಾನಾಪುರೆ, ಸಿ.ಬಿ.ಬಾಗೇವಾಡಿ, ಜಿ.ಎಸ್.ಅಂಬಲಿ, ವಿ.ವಿ.ಭಂತಿ, ಜಿ.ಎಚ್.ಮುತಾಲಿಕ, ಎ.ಎ.ಮಗದುಮ್ಮ, ಎಸ್.ಎನ್.ಕುರಣಿ, ಆರ್.ಬಿ.ಪಾಟೀಲ, ಸುಭಾಸ ಜೊಂಡ, ದಯಾನಂದ ಕೋಟಗಿ ಸೇರಿದಂತೆ ಇತರೆ ನಿವೃತ್ತ ಶಿಕ್ಷಕರನ್ನು ಸತ್ಕರಿಸಲಾಯಿತು.

ಪತ್ರಕರ್ತ ಚೇತನ ಹೊಳೆಪ್ಪಗೋಳ, ಆನಂದ ಮರೆನ್ನವರ, ಆನಂದ ಸಂಬಾಳ, ಸಾಗರ ಅಡಿಕೆ, ಆನಂದ ಕುರ್ಲಿ, ಶೋಭಾ ನಂದಿಕೋಲಮಠ, ಸದಾನಂದ ಬಾಗಿ, ಅಶ್ವಿನಿ ದಿಕ್ಷೀತ, ಸರ್ಫರಾಜ ಖಾನಜಾದೆ ಸೇರಿದಂತೆ ನೂರಾರು ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-21-615161011

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.