ಹುಕ್ಕೇರಿ: ‘ವಿದ್ಯೆ ಕಲಿಸಿದ ಗುರುಗಳನ್ನು ಸತ್ಕಾರ ಮಾಡಿ ಗೌರವಿಸುವ ಪರಂಪರೆ ಪ್ರಾಚೀನ ಕಾಲದಿಂದಲೂ ನಮ್ಮ ಸಂಪ್ರದಾಯದಲ್ಲಿದೆ. ಇಂದಿನ ವಿದ್ಯಾರ್ಥಿಗಳು ಕೂಡ ಪರಂಪರೆ ಮುಂದುವರಿಸಿಕೊಂಡು ಬರುತ್ತಿರುವುದು ಸಂತಸ’ ಎಂದು ನಿವೃತ್ತ ಶಿಕ್ಷಕ ಎಸ್.ಜಿ. ಕುಂಬಾರ ಹೇಳಿದರು.

ತಾಲ್ಲೂಕಿನ ಯಮಕನಮರಡಿಯ ಗುರುಸಿದ್ದ ಮಹಾಸ್ವಾಮೀಜಿ ಸಭಾಭವನದಲ್ಲಿ ಸಿ.ಇ.ಎಸ್ ಪ್ರೌಢಶಾಲೆ 1982-1983ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಶನಿವಾರ ಹಮ್ಮಿಕೊಂಡಿದ್ದ ‘ಗುರು ವಂದನಾ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗುರು ಶಿಷ್ಯರ ಆತ್ಮೀಯ ಸಂಬಂಧವನ್ನು ಮುಂದಿನ ಪೀಳಿಗೆಯು ಮುಂದುವರಿಸಿಕೊಂಡು ಸಾಗಬೇಕು. ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆಯನ್ನು ವಿದೇಶಿಗರು ಕೂಡ ಅನುಸರಿಸುತ್ತಿದ್ದಾರೆ’ ಎಂದರು.

ಶಿಕ್ಷಕ ಎಸ್.ಕೆ. ಘೋಡೆವಾಳೆ ಮಾತನಾಡಿ, ‘ಎಲ್ಲರೂ ಪ್ರೀತಿ ವಿಶ್ವಾಸ ಹಂಚಿಕೊಂಡು ಬದುಕುಬೇಕು. ಗುರುವಿನ ಸ್ಥಾನ ಶ್ರೇಷ್ಠವಾದದ್ದು. ಗುರು ಶಿಷ್ಯರ ಅವಿನಾಭಾವ ಸಂಬಂಧ ಬೆಲೆ ಕಟ್ಟಲಾಗದು’ ಎಂದರು.

ನಿವೃತ ಶಿಕ್ಷಕ ಎಸ್.ಆರ್. ಶೆಟ್ಟರ್, ಎಚ್.ಎಂ. ಮಮದಾಪುರ, ಎಸ್.ಡಿ. ಕಳಶೆಟ್ಟಿ, ಆರ್.ಬಿ. ಪಾಟೀಲ್, ಸಿಬ್ಬಂದಿ ಎಸ್.ಜಿ. ವಾಘ, ಹಳೆಯ ವಿದ್ಯಾರ್ಥಿಗಳಾದ ಉಮೇಶ ತುಬಚಿ, ಅನೀಲ್ ಮಂಗಾವತಿ, ಭೀಮರಾವ ಜಿಂಡ್ರಾಳ, ಸರೋಜನಿ ಕುಲಕರ್ಣಿ, ಗಿರಿಜಾ ತುಬಚಿ, ಪುಷ್ಪಾ ಪಾಟೀಲ್, ಶೋಭಾ ಯಾದವಾಡಿ, ವಾಸುದೇವ ವಾಜಂತ್ರಿ, ಶೋಭಾ ದತ್ತವಾಡೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-21-131071637

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.